ಇಂದು ವಿಶ್ವ ಸೊಳ್ಳೆ ದಿನ. ಸಾಂಕ್ರಾಮಿಕ ಕಾಯಿಲೆ ಹರಡುವ ಸೊಳ್ಳೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ.
1897 ರಲ್ಲಿ ಇದೇ ದಿನ ಅಂದರೆ ಆಗಸ್ಟ್ 20 ರಂದು ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರಾಸ್ ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆ ಕಾರಣ ಎಂದು ಕಂಡುಹಿಡಿದರು. ಈ ಕಾರಣದಿಂದಲೂ ಇಂದಿನ ದಿನವನ್ನು ವಿಶ್ವ ಸೊಳ್ಳೆ ದಿನವನ್ನಾಗಿ ಆಚರಿಸಲಾಗುತ್ತದೆ.
ಸೊಳ್ಳೆ ಬಗ್ಗೆ ಕೆಲ ಇಂಟರೆಸ್ಟಿಂಗ್ ಸಂಗತಿಗಳು:
- ಹೆಣ್ಣು ಸೊಳ್ಳೆಗಳು ಮಾತ್ರ ಮಾನವನ ರಕ್ತವನ್ನು ಹೀರುತ್ತವೆ, ಗಂಡು ಸೊಳ್ಳೆ ಹೂವಿನ ಮಕರಂದವನ್ನು ತಿನ್ನುತ್ತವೆ.
- ಹೆಣ್ಣು ಸೊಳ್ಳೆಗಳಿಗೆ ತಮ್ಮ ಮೊಟ್ಟೆಗಳ ಬೆಳವಣಿಗೆಗೆ ರಕ್ತದ ಅಗತ್ಯವಿರುತ್ತದೆ. ಆದ್ದರಿಂದ ಮಾನವರು ಮತ್ತು ಇತರ ಪ್ರಾಣಿಗಳಿಂದ ರಕ್ತವನ್ನು ಹೀರಿಕೊಳ್ಳುತ್ತವೆ.
- ಅನಾಫಿಲಿಸ್ ಸೊಳ್ಳೆ ಹೆಚ್ಚಾಗಿ ಮುಸ್ಸಂಜೆ ವೇಳೆ ಮತ್ತು ಮುಂಜಾನೆ ವೇಳೆ ಕಚ್ಚುತ್ತದೆ. ಆದರೆ ಈಡಿಸ್ ಈಜಿಪ್ಟಿಯು ಹೆಚ್ಚಾಗಿ ಮುಂಜಾನೆ ಮತ್ತು ಸಂಜೆ ಮೊದಲು ಕಚ್ಚುತ್ತದೆ.
- ಸೊಳ್ಳೆಯ ಗರಿಷ್ಠ ಜೀವಿತಾವಧಿ 6 ತಿಂಗಳು.
- ಪ್ರಾಣಿಗಳು ಮತ್ತು ಮಾನವರ ಉಸಿರಾಟದ ಮೂಲಕ ಸೊಳ್ಳೆಗಳು ತಮ್ಮ ಬೇಟೆಯನ್ನು ಕಂಡುಕೊಳ್ಳುತ್ತವೆ. ಅಂದಾಜು 10-50 ಮೀಟರ್ ದೂರದಿಂದ ಸೊಳ್ಳೆಗಳು ತಮ್ಮ ಬೇಟೆಯನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿವೆ.
ಸೊಳ್ಳೆಗಳ ಬಗ್ಗೆ ಇರುವ ಮೂಢನಂಬಿಕೆಗಳು :
- ಓ ಪಾಸಿಟಿವ್ ರಕ್ತದ ಗುಂಪಿನ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ.
- ಈಡಿಸ್ ಅಲ್ಬೊಪಿಕ್ಟಸ್ ಸೊಳ್ಳೆಯ ಲ್ಯಾಂಡಿಂಗ್ ಆದ್ಯತೆಗಳ ಕುರಿತು ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಹೆಚ್) ನಡೆಸಿದ ಅಧ್ಯಯನದ ಪ್ರಕಾರ, ಎ, ಬಿ, ಎಬಿ ಮತ್ತು ಓ ರಕ್ತ ಗುಂಪುಗಳ ಕಡೆಗೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎಂದು ತಿಳಿದು ಬಂದಿದೆ.
- ಇದಲ್ಲದೆ, ಗಾಢ ಬಣ್ಣದ ಬಟ್ಟೆಗಳು ಮತ್ತು ಹೆಚ್ಚಿನ ದೇಹದ ಉಷ್ಣತೆಯು ಸೊಳ್ಳೆಗಳಿಗೆ ಆಕರ್ಷಕವಾಗುತ್ತದೆ.
- ಸೊಳ್ಳೆಗಳು ಕೋವಿಡ್-19 ಅನ್ನು ಹರಡಬಹುದು: ಇಲ್ಲಿಯವರೆಗೆ ಕೊರೊನಾ ಸೊಳ್ಳೆ ಕಡಿತದ ಮೂಲಕ ಹರಡಬಹುದು ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ. ಇದು ಉಸಿರಾಟದ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಹೊರಬರುವ ಹನಿಗಳ ಮೂಲಕ ಹರಡುತ್ತದೆ.
- ಸೊಳ್ಳೆ ಕಡಿತದ ಸ್ಥಳವನ್ನು ತುರಿಸಿಕೊಳ್ಳುವುದರಿಂದ ನೋವು ವೇಗವಾಗಿ ಗುಣವಾಗುತ್ತದೆ: ಇಲ್ಲ. ಕೆಲವೊಮ್ಮೆ ಸೊಳ್ಳೆ ಕಡಿತವನ್ನು ತುರಿಸಿಕೊಳ್ಳುವುದು ಹಿತಕರವೇ ಆಗಿರುತ್ತದೆ. ಆದರೆ ಇದು ಕಜ್ಜಿಯನ್ನು ಗುಣಪಡಿಸುವುದಿಲ್ಲ. ಇದರಿಂದ ಚರ್ಮದ ಸೋಂಕು ಸಹ ಹರಡಬಹುದು. ಇದಕ್ಕೆ ಐಸ್ ಪ್ಯಾಕ್, ಅಲೋವೆರಾ ಜೆಲ್ ಅಥವಾ ಕ್ಯಾಲಮೈನ್ ಲೋಷನ್ ಬಳಸಬಹುದು.
- ಕಚ್ಚಿದ ನಂತರ ಸೊಳ್ಳೆಗಳು ಸಾಯುತ್ತವೆ: ಇಲ್ಲ. ಕಚ್ಚಿದ ನಂತರ ಸೊಳ್ಳೆ ಸಾಯುವುದಿಲ್ಲ. ಬದಲಾಗಿ ಅದು ಮೊಟ್ಟೆಗಳನ್ನು ಇಡಲು ಬೇಕಾದಷ್ಟು ರಕ್ತವನ್ನು ಪಡೆಯಲು ಅನೇಕ ಜನರನ್ನು ಅಥವಾ ಒಬ್ಬರನ್ನೇ ಮತ್ತೆ-ಮತ್ತೆ ಕಚ್ಚುತ್ತದೆ.