ETV Bharat / bharat

ಟ್ರಂಪ್​ ಸ್ವಾಗತಕ್ಕೆ ಅಹಮದಾದ್​ ಸಜ್ಜು.. ಅಂದು ಏನೇನು ಕಾರ್ಯಕ್ರಮ!?

ಭಾರತಕ್ಕೆ ಆಗಮಿಸುತ್ತಿರುವ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಸ್ವಾಗತಿಸಲು ಅಹಮದಾದ್​ನಲ್ಲಿ ಸಕಲ ಸಿದ್ಧತೆಗಳನ್ನ ನಡೆಸಲಾಗುತ್ತಿದೆ. ಅಂದು ಮೋದಿ ಮತ್ತು ಟ್ರಂಪ್​ ಭರ್ಜರಿ ರೋಡ್​ ಶೋ ನಡೆಸಲಿದ್ದಾರೆ.​

sddd
ಟ್ರಂಪ್​ ಸ್ವಾಗತಕ್ಕೆ ಅಹಮದಾದ್​ ಸಜ್ಜು,ಅಂದು ಏನೇನೂ ಕಾರ್ಯಕ್ರಮ!?c
author img

By

Published : Feb 18, 2020, 1:54 PM IST

ಅಹಮದಾಬಾದ್ : ಫೆಬ್ರವರಿ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಲಿದ್ದಾರೆ. ಟ್ರಂಪ್​ ಸ್ವಾಗತಿಸಲು ಅಹಮದಾಬಾದ್​​ನಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಟ್ರಂಪ್ ಮತ್ತು ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಫೆಬ್ರವರಿ 24 ರಿಂದ 25ರವರೆಗೆ ಭಾರತಕ್ಕೆ ಆಗಮಿಸಲಿದ್ದಾರೆ. ಅಹಮದಾಬಾದ್ ನಗರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮುನ್ಸಿಪಲ್ ಕಾರ್ಪೊರೇಷನ್ 22 ಕಿ.ಮೀ ಉದ್ದದ ರೋಡ್ ಶೋ ಆಯೋಜಿಸಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಪಾಲಿಕೆ ಎಲ್ಲ ಧರ್ಮದ ಮತ್ತು ಸಂಸ್ಥೆಗಳ 300 ಪ್ರತಿನಿಧಿಗಳ ಸಭೆ ಕರೆದಿದೆ. ಈ ಮೆಗಾ ಕಾರ್ಯಕ್ರಮಕ್ಕಾಗಿ ಜನರನ್ನ ಸಜ್ಜುಗೊಳಿಸಲು ನಿರ್ಧರಿಸಿದೆ.

xasddd
ಟ್ರಂಪ್​ ಸ್ವಾಗತಕ್ಕೆ ಅಹಮದಾದ್​ ಸಜ್ಜು,ಅಂದು ಏನೇನೂ ಕಾರ್ಯಕ್ರಮ!?

ಭಾಗವಹಿಸುವವರು ಆಯಾ ಸಮುದಾಯಗಳ ವರ್ಣರಂಜಿತ ಸಾಂಪ್ರದಾಯಿಕ ಉಡುಪಿನಲ್ಲಿರುತ್ತಾರೆ. ಇಂದಿರಾ ಸೇತುವೆಯಿಂದ ಹೊಸದಾಗಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ ಕ್ರೀಡಾಂಗಣಕ್ಕೆ ಟ್ರಂಪ್​ ಅವರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ವಿವಿಧ ರಾಜ್ಯಗಳ 50,000 ಜನ ಇದರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. 22 ಕಿ.ಮೀ ಮಾರ್ಗದಲ್ಲಿ ವಿಶೇಷವಾಗಿ 28 ಗುಂಪು ಮಾಡಲಾಗಿದೆ. 28 ರಾಜ್ಯಗಳ ಕಲಾವಿದರು ತಮ್ಮ ಸಾಂಪ್ರದಾಯಿಕ ಜಾನಪದ ನೃತ್ಯ ಮತ್ತು ಸಂಗೀತ, ವೇಷಭೂಷಣಗಳನ್ನು ಪ್ರದರ್ಶಿಸಲಿದ್ದಾರೆ.

ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಕ್ರೀಡಾಂಗಣ ಉದ್ಘಾಟಿಸಲಿದ್ದಾರೆ. ರೋಡ್ ಶೋನಲ್ಲಿ ಭಾಗವಹಿಸುವವರು ಯುಎಸ್ಎ ಮತ್ತು ಭಾರತದ ರಾಷ್ಟ್ರೀಯ ಧ್ವಜಗಳನ್ನು ಹಿಡಿದು ಸಾಗಲಿದ್ದಾರೆ.

ಟ್ರಂಪ್​ರನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ಮೋದಿ-ಟ್ರಂಪ್​ರ ಈ ರೋಡ್ ಶೋಗಾಗಿ 4 ಕೋಟಿ ರೂ. ವೆಚ್ಚದಲ್ಲಿ ವಿವಿಧ ಜಾತಿಯ ಒಂದು ಲಕ್ಷ ಗಿಡ ನೆಡಲಾಗುತ್ತಿದೆ. ರಸ್ತೆ ಹಸಿರುಮಯವಾಗಿ ಕಂಗೊಳಿಸಲಿದೆ. ಕಾರ್ಯಕ್ರಮಕ್ಕಾಗಿ ಭರದ ಸಿದ್ದತೆ ನಡೆದಿವೆ. ವಿಮಾನ ನಿಲ್ದಾಣದಿಂದ ಗಾಂಧಿ ಆಶ್ರಮ ಮತ್ತು ಕ್ರೀಡಾಂಗಣದವರೆಗೆ ಮಾಡಲಾಗಿರುವ ವ್ಯವಸ್ಥೆಯನ್ನು ಗುಜರಾತ್ ಸಿಎಂ ವಿಜಯ್ ರೂಪಾನಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.