ETV Bharat / bharat

ಜಾರ್ಖಂಡ್​​ ದಂಪತಿಗೆ ಹರಿದು ಬಂದ ನೆರವು: ಅದಾನಿಯಿಂದ ಉಚಿತ ವಿಮಾನ ಪ್ರಯಾಣದ ವ್ಯವಸ್ಥೆ

ಸಾವಿರಕ್ಕೂ ಹೆಚ್ಚು ಕಿ.ಮೀಟರ್​ ಸ್ಕೂಟರ್​ ಪ್ರಯಾಣ ಮಾಡಿ ಗರ್ಭಿಣಿ ಪತ್ನಿಯನ್ನು ಪರೀಕ್ಷೆ ಬರೆಯಿಸಿದ್ದ ಜಾರ್ಖಂಡ್​ ವ್ಯಕ್ತಿಗೆ ನೆರವಿನ ಮಹಾಪೂರವೇ ಹರಿದು ಬಂದಿದೆ. ಈ ದಂಪತಿಗೆ ವಿಮಾನ ಪ್ರಯಾಣದ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

Flight tickets sent to Dhananjay
ಗ್ವಾಲಿಯರ್​ ದಂಪತಿಗೆ ಹರಿದು ಬಂದ ಸಹಾಯ
author img

By

Published : Sep 7, 2020, 12:26 PM IST

ಗ್ವಾಲಿಯರ್​ (ಮಧ್ಯಪ್ರದೇಶ): ಪರೀಕ್ಷೆ ಬರೆಸಲು ತನ್ನ ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಸಾವಿರಕ್ಕೂ ಹೆಚ್ಚು ಕಿಲೋಮೀಟರ್​ ದೂರಕ್ಕೆ ಸ್ಕೂಟರ್​ನಲ್ಲಿ ಕರೆತಂದು ದೇಶದ ಗಮನ ಸೆಳೆದಿದ್ದ ಜಾರ್ಖಂಡ್​ನ ವ್ಯಕ್ತಿಗೆ ಸಾಕಷ್ಟು ಜನರು ನೆರವು ನೀಡಿದ್ದಾರೆ.

ಧನಂಜಯ್​​ ಮತ್ತು ಸೋನಿ ಹೆಂಬ್ರಮ್​ ದಂಪತಿಯ ಸಾಹಸಗಾಥೆ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಸಹಾಯಕ್ಕೆ ಧಾವಿಸಿದ ಅದಾನಿ ಫೌಂಡೇಶನ್ ಅಧ್ಯಕ್ಷೆ ಸ್ವೀಟಿ ಅದಾನಿ, ದಂಪತಿಗೆ ಊರಿಗೆ ತೆರಳಲು ವಿಮಾನ ಟಿಕೆಟ್​ ವ್ಯವಸ್ಥೆ ಮಾಡಿದ್ದಾರೆ. ಅದೇ ರೀತಿ ಗ್ವಾಲಿಯರ್​ ಮರ್ಚೆಂಟ್ ಅಸೋಸಿಯೇಷನ್​ ಈ ದಂಪತಿಯ ಸ್ಕೂಟರ್​ನ್ನು ​ರೈಲಿನ ಮುಖಾಂತರ ಮನೆಗೆ ತಲುಪಿಸುವುದಾಗಿ ಹೇಳಿದೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಧನಂಜಯ್, ಅದಾನಿ ಫೌಂಡೇಶನ್​ ಅಧ್ಯಕ್ಷರು ನಮಗೆ ವಿಮಾನ ಪ್ರಯಾಣದ ವ್ಯವಸ್ಥೆ ಮಾಡಿದ್ದಾರೆ. ಸೆಪ್ಟೆಂಬರ್​ 16 ರಂದು ಹೈದರಾಬಾದ್​ ಮೂಲಕ ರಾಂಚಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದಾರೆ. ​

ಪತ್ನಿಯನ್ನು ಸ್ಕೂಟರ್​ನಲ್ಲಿ ಕರೆತಂದಿದ್ದ ಧನಂಜಯ್​

ಇದನ್ನೂ ಓದಿ: ಪರೀಕ್ಷೆಗೋಸ್ಕರ ಏಳು ತಿಂಗಳ ಗರ್ಭಿಣಿ ಪತ್ನಿಯನ್ನ ಸ್ಕೂಟರ್​ ಮೇಲೆ 1,150 ಕಿ.ಮೀ ಕರೆದೊಯ್ದ ಗಂಡ!

ಜಾರ್ಖಂಡ್​ನ ಗೊಡ್ಡಾ ಜಿಲ್ಲೆಯ ಗಂಟಾತೊಲಾ ಗ್ರಾಮದ ಧನಂಜಯ್, ತನ್ನ ಪತ್ನಿಯನ್ನು ಡಿಎಡ್​​ ಪರೀಕ್ಷೆ ಬರೆಸಲು ತನ್ನ ಗ್ರಾಮದಿಂದ 1,150 ಕಿ.ಮೀ ದೂರದ ಮಧ್ಯಪ್ರದೇಶ ಗ್ವಾಲಿಯರ್​ಗೆ ಸ್ಕೂಟರ್​​ನಲ್ಲಿ ಕರೆತಂದಿದ್ದ. ವಿಶೇಷವೆಂದರೆ, ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಲಿರುವ ಧನಂಜಯ್​ ಪತ್ನಿ ತುಂಬು ಗರ್ಭಿಣಿ ಸೋನಿ ಹೆಂಬ್ರಮ್​​ ಕೂಡ ಹೇಗಾದರೂ ಪರೀಕ್ಷೆ ಬರೆಯಲೇಬೇಕೆಂದು ಸಾಹಸ ಮಾಡಿ ಗಂಡನೊಂದಿಗೆ ಸ್ಕೂಟರ್​ ಪ್ರಯಾಣ ಮಾಡಿದ್ದಳು. ಸಾವಿರಕ್ಕೂ ಹೆಚ್ಚು ಕಿ.ಮೀ ದೂರ ಸ್ಕೂಟರ್​ ಪ್ರಯಾಣ ಮಾಡಿ ಗ್ವಾಲಿಯರ್​ ತಲುಪಿದ ಸೋನಿ, ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾಳೆ. ದಂಪತಿಯ ಕಾರ್ಯಕ್ಕೆ ದೇಶಾದ್ಯಂತ ಶ್ಲಾಘಣೆ ವ್ಯಕ್ತವಾಗಿದೆ ಮತ್ತು ನೆರವಿನ ಮಹಾಪೂರ ಹರಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.