ಮುಂಬೈ: ಕೊರೊನಾದ ವಿಷಮ ಪರಿಸ್ಥಿತಿಯಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಚಿತ್ರೀಕರಣ ಸಂಬಂದ ಟರ್ಕಿಗೆ ಹಾರಿದ್ದಾರೆ. ಈ ವೇಳೆ, ಟರ್ಕಿಯ ಪ್ರಥಮ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕೋವಿಡ್ ಮಾರ್ಗಸೂಚಿ ಅನ್ವಯ ಅಮೀರ್ ಖಾನ್ ಎರಡು ವಾರಗಳ ಕಾಲ ಸರ್ಕಾರಿ ಹಾಸ್ಟೆಲ್ನಲ್ಲಿರಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.
ಟರ್ಕಿ ಭೇಟಿ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಕೋವಿಡ್-19 ನಿಯಮಾವಳಿಗಳ ಪ್ರಕಾರ ಟರ್ಕಿಯಿಂದ ಹಿಂದಿರುಗಿದ ನಂತರ ನಟ ಅಮೀರ್ ಖಾನ್ ಅವರನ್ನು ಎರಡು ವಾರಗಳ ಕಾಲ ಕ್ವಾರಂಟೈನ್ ಮಾಡಬೇಕು ಎಂದು ಬರೆದುಕೊಂಡಿದ್ದಾರೆ.
-
'Aamir Khan must be quarantined at govt hostel on return from Turkey': Dr Subramanian @Swamy39 https://t.co/hlIzTXnyzr
— Hindu Nationalist (@Ravinder536R) August 19, 2020 " class="align-text-top noRightClick twitterSection" data="
">'Aamir Khan must be quarantined at govt hostel on return from Turkey': Dr Subramanian @Swamy39 https://t.co/hlIzTXnyzr
— Hindu Nationalist (@Ravinder536R) August 19, 2020'Aamir Khan must be quarantined at govt hostel on return from Turkey': Dr Subramanian @Swamy39 https://t.co/hlIzTXnyzr
— Hindu Nationalist (@Ravinder536R) August 19, 2020
ನಟ ಆಮೀರ್ ಖಾನ್ ಅವರು 'ಲಾಲ್ ಸಿಂಗ್ ಛಡ್ಡಾ' ಸಿನಿಮಾದ ಚಿತ್ರೀಕರಣಕ್ಕಾಗಿ ಟರ್ಕಿಗೆ ತೆರಳಿದ್ದಾರೆ. ಅಲ್ಲಿ ಅವರು ಟರ್ಕಿಯ ಮೊದಲ ಮಹಿಳೆ ಎಮೈನ್ ಎರ್ಡೊಗನ್ ಅವರನ್ನು ಭೇಟಿಯಾಗಿದ್ದಾರೆ. ಭೇಟಿಯ ಮಾಡಿದ ಫೋಟೊಗಳು ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದ್ದವು. ಸಾಲದೆಂಬಂತೆ ನೆಟ್ಟಿಗರು ಈ ಭೇಟಿ ಖಂಡಿಸಿ ಸೋಷಿಯಲ್ ಮೀಡಿಯಾದಲ್ಲಿ ಆಮೀರ್ ಖಾನ್ ಅವರನ್ನು ಟ್ರೋಲ್ ಮಾಡಿದ್ದಾರೆ.