ETV Bharat / bharat

ತಬ್ಲಿಘಿ ಜಮಾತ್​ ವಿರುದ್ಧ ಮಾತಾಡಿದ್ದಕ್ಕೆ ಶೂಟೌಟ್​​: ಪ್ರಯಾಗ್‌​ರಾಜ್​ನಲ್ಲಿ ವ್ಯಕ್ತಿ ಸಾವು

ತಬ್ಲಿಘಿ ಜಮಾತ್​ ವಿರುದ್ಧ ಮಾತನಾಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ಆರೋಪಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

shootout
ಶೂಟೌಟ್
author img

By

Published : Apr 5, 2020, 1:27 PM IST

ಲಖನೌ(ಉತ್ತರಪ್ರದೇಶ) : ತಬ್ಲಿಘಿ ಜಮಾತ್​ ವಿರುದ್ಧ ಮಾತನಾಡಿದ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಗ್​ರಾಜ್​ನ ಕರೇಲಿ ಪ್ರದೇಶದ ಟೀ ಸ್ಟಾಲ್​ ಒಂದರ ಬಳಿ ಘಟನೆ ನಡೆದಿದ್ದು, ಮೃತನನ್ನು ಲೌತಾನ್​ ನಿಷಾದ್​ ಎಂದು ಗುರ್ತಿಸಲಾಗಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕೊಂದ ಆರೋಪಿ ವಿರುದ್ಧ ನ್ಯಾಷನಲ್​ ಸೆಕ್ಯೂರಿಟಿ ಆಕ್ಟ್​ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಗೆ ಲಾಕ್​ ಡೌನ್​ ವೇಳೆ ಟೀ ಅಂಗಡಿ ಯಾಕೆ ತೆರೆದಿದ್ದರು ಎಂಬುದರ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್​ ಸ್ಪಷ್ಟನೆ ಕೇಳಿದ್ದು ಟೀ ಅಂಗಡಿಯ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೆಲ ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್​ನ ಮರ್ಕಾಜ್​ ಕಟ್ಟಡದಲ್ಲಿ ತಬ್ಲಿಘಿ ಜಮಾತ್​ ಆಯೋಜಿಸಿತ್ತು. ಈ ಕಾರ್ಯಕ್ರಮದ ವೇಳೆ ಕೊರೊನಾ ಸೋಂಕು ಬಹುಪಾಲು ಮಂದಿಗೆ ಹರಡಿತ್ತು. ಸಾವಿರಾರು ಮಂದಿಯನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.