ಕೋಲ್ಕತ್ತಾ: 85 ವರ್ಷದ ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಮೂಲದ ನರ್ಸ್ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸುಕುಮಾರಿ ಸಹ ಎಂಬ 85 ವರ್ಷದ ವೃದ್ಧೆಯೊಬ್ಬರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ಕೊಡಿಸಬೇಕೆಂದು ನರ್ಸ್ವೊಬ್ಬರನ್ನು ನೇಮಿಸಿದ್ದರು. ವೃದ್ಧೆ ಇದ್ದ ಕೋಣೆಯಲ್ಲಿ ಸಿಸಿ ಕ್ಯಾಮೆರಾ ಸಹ ಅಳವಡಿಸಲಾಗಿತ್ತು.
ಗುರುವಾರ ರಾತ್ರಿ ಅತೀವ ನೋವಿನಿಂದ ವೃದ್ಧೆಯು ಚೀರಾಡಿದಾಗ ಒಳಗೆ ಬಂದ ನರ್ಸ್ ಅವರ ಕಪಾಳಕ್ಕೆ ಬಾರಿಸಿ ಸುಮ್ಮನಿರುವಂತೆ ಗದರಿದ್ದಾಳೆ. ಸಿಸಿ ಕ್ಯಾಮೆರಾದಲ್ಲಿ ಈ ವಿಡಿಯೋ ನೋಡಿದ ಮನೆಯವರು ಕೂಡಲೇ ನರ್ಸ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.