ವಯನಾಡು(ಕೇರಳ): ಕೇರಳದ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಇಂಗ್ಲಿಷ್ನಲ್ಲಿ ಮಾಡಿರುವ ಭಾಷಣವನ್ನು 12ನೇ ತರಗತಿ ಬಾಲಕಿ ಮಲಯಾಳಂ ಭಾಷೆಗೆ ಅನುವಾದಿಸಿ ಮೆಚ್ಚುಗೆ ಗಳಿಸಿದ್ದಾಳೆ.
ಕೇರಳದ ವಯನಾಡಿನ ಶಾಲೆಯಲ್ಲಿ ವಿಜ್ಞಾನ ಲ್ಯಾಬ್ ಉದ್ಘಾಟನೆಗೆ ತೆರಳಿದ್ದ ವೇಳೆ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಬಳಿ, ನನ್ನ ಭಾಷಣವನ್ನು ಇಲ್ಲಿ ಯಾರಾದ್ರೂ ಇಂಗ್ಲಿಷ್ನಿಂದ ಮಲಯಾಳಂಗೆ ಅನುವಾದ ಮಾಡುತ್ತೀರಾ? ಎಂದು ಕೇಳಿದ್ದಾರೆ. ಈ ವೇಳೆ 12ನೇ ತರಗತಿ ವಿದ್ಯಾರ್ಥಿನಿ ಸಫಾ ಸೆಬಿನಾ ವೇದಿಕೆಗೆ ಬಂದು ಸಂಪೂರ್ಣ ಭಾಷಣವನ್ನ ಅನುವಾದ ಮಾಡಿದ್ದಾರೆ.
ರಾಹುಲ್ ಗಾಂಧಿ ಗಂಟೆಗೂ ಹೆಚ್ಚು ಕಾಲ ಇಂಗ್ಲಿಷ್ನಲ್ಲಿ ಮಾಡಿರುವ ಭಾಷಣದ ಅನುವಾದವನ್ನು ಸಂಪೂರ್ಣವಾಗಿ ಮಲಯಾಳಂಗೆ ಪರಿವರ್ತಿಸಿ ಜನರ ಕಿವಿ ತಲುಪಿಸಿದ್ದಾರೆ.
ಹಿಂದೊಮ್ಮೆ ಕೇರಳದಲ್ಲಿ ರಾಹುಲ್ ಗಾಂಧಿ ಚುನಾವಣಾ ಭಾಷಣವನ್ನು ಕಾಂಗ್ರೆಸ್ ಮುಖಂಡ ಹಾಗು ರಾಜ್ಯಸಭೆಯ ಮಾಜಿ ಉಪಸಭಾಧ್ಯಕ್ಷ ಪಿ.ಜೆ. ಕುರಿಯನ್ ಅನುವಾದಿಸಿದ್ದು ನಗೆಪಾಟಲಿಗೆ ಗುರಿಯಾಗಿತ್ತು.