ತಮಿಳುನಾಡು: ಹೆಣ್ಣಿನ ಹೃದಯವೇ ಅಂತಹುದು, ಎಲ್ಲದಕ್ಕೂ ಮರಗುತ್ತದೆ. ಇಲ್ಲೋರ್ವ 70 ವರ್ಷದ ವೃದ್ಧೆ ಚಿಕ್ಕದಾಗಿ ಹೋಟೆಲ್ ನಡೆಸುತ್ತಿದ್ದು, ಹಸಿದು ಬಂದ ಬಡವರಿಗೆ ಉಚಿತವಾಗಿ ಇಡ್ಲಿ ನೀಡುತ್ತಿದ್ದಾರೆ.
ರಾಣಿ ಎಂಬ ವೃದ್ಧೆ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ. ರಾಮೇಶ್ವರಂನ ಅಗ್ನಿ ತೀರ್ಥಂ ಬಳಿ ಇವರು ಅಂಗಡಿಯನ್ನು ನಡೆಸುತ್ತಿದ್ದು, ಹಸಿದವರಿಗೆ ಮತ್ತು ಬಡವರಿಗೆ ಉಚಿತವಾಗಿ ಇಡ್ಲಿ ಬಡಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಣಿ, ಸಾಮಾನ್ಯವಾಗಿ ನಾನು ಒಂದು ಪ್ಲೇಟ್ ಇಡ್ಲಿಗೆ 30 ರೂ. ತೆಗೆದುಕೊಳ್ಳುತ್ತೇನೆ. ಆದರೆ, ಇಂತಿಷ್ಟು ಹಣವನ್ನೇ ಕೊಡಬೇಕು ಎಂದು ಒತ್ತಾಯ ಮಾಡುವುದಿಲ್ಲ. ಹಣ ಇಲ್ಲದವರಿಗೆ ಉಚಿತವಾಗಿ ಇಡ್ಲಿ ನೀಡುತ್ತೇನೆ ಎಂದರು.
ಇವರು ಇಂದಿಗೂ ಕೂಡ ಇಡ್ಲಿಯನ್ನು ಸೌದೆ ಒಲೆಯ ಮೇಲೆ ಬೇಯಿಸೋದು ವಿಶೇಷ.