ಇಂದೋರ್: ಮಹಾಮಾರಿ ಕೊರೊನಾ ಆರ್ಭಟಕ್ಕೆ ದೇಶದಲ್ಲಿ ಇಂದು ಮತ್ತೊಬ್ಬ ವೈದ್ಯ ಬಲಿಯಾಗಿದ್ದಾರೆ. ಈ ಮೂಲಕ ಸಾವನ್ನಪ್ಪಿರುವ ವೈದ್ಯರ ಸಂಖ್ಯೆ 2ಕ್ಕೆ ಏರಿಕೆಯಾಗಿದೆ. ಜತೆಗೆ ಕೆಲ ವೈದ್ಯರು ಸೋಂಕಿನಿಂದ ಬಳಲುತ್ತಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದ ಇಂದೋರ್ನಲ್ಲೇ ಮತ್ತೊಬ್ಬ 65 ವರ್ಷದ ವೈದ್ಯ ಸಾವನ್ನಪ್ಪಿದ್ದಾಗಿ ಅಲ್ಲಿನ ಹಿರಿಯ ವೈದ್ಯಾಧಿಕಾರಿ ಪ್ರವೀಣ್ ಜಾಡಿಯಾ ತಿಳಿಸಿದ್ದಾರೆ.
ನಿನ್ನೆ ಇಂದೋರ್ನ ಅರವಿಂದ ಆಸ್ಪತ್ರೆಯಲ್ಲಿ ವೈದ್ಯ ಶತ್ರುಘ್ನ ಪಂಜವಾನಿ ಎಂಬುವರು ಮಾರಣಾಂತಿಕ ಸೋಂಕಿನಿಂದ ನಿಧನರಾಗಿದ್ದರು. ಈ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 235 ತಲುಪಿದೆ.
ದೇಶದಲ್ಲಿ ಸದ್ಯ 6,761 ಮಂದಿ ಸೋಂಕಿತರಿದ್ದು, 206 ಮಂದಿ ಈ ಪಿಡುಗಿಗೆ ಪ್ರಾಣ ಕಳೆದುಕೊಂಡಿದ್ದಾರೆ.