ಮುಂಬೈ: ಸಾಕಷ್ಟು ವಿವಾದ ಸೃಷ್ಟಿಸಿದ್ದ ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ '800' ವಿಚಾರಕ್ಕೆ ಸಂಬಂಧಿಸಿದಂತೆ ತಮಿಳು ನಟ ವಿಜಯ್ ಸೇತುಪತಿ ಅವರ ಅಪ್ರಾಪ್ತ ಮಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿಅತ್ಯಾಚಾರ ಬೆದರಿಕೆ ಬಂದಿದೆ.
ಸೋಮವಾರವಷ್ಟೇ ಮುತ್ತಯ್ಯ ಮುರಳೀಧರನ್ ಮನವಿಗೆ ಸ್ಪಂದಿಸಿ ವಿಜಯ್ ಸೇತುಪತಿ ಸಿನಿಮಾದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದರು. ಸೋಮವಾರ ಸಂಜೆ @ItsRithikRajh ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಅತ್ಯಾಚಾರ ಬೆದರಿಕೆ ಬಂದಿದೆ.
ವಿಜಯ್ ಸೇತುಪತಿ ಹಾಗೂ ಮಗಳ ಚಿತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ತಮಿಳ್ ಈಲಂ (ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಜ್ಯಕ್ಕೆ ಬೇಡಿಕೆ ಇಡುತ್ತಿರುವ ಸಮುದಾಯ) ಜನರ ಕಷ್ಟದ ಜೀವನವನ್ನು ವಿಜಯ್ ಸೇತುಪತಿಗೆ ಅರ್ಥ ಮಾಡಿಸಬೇಕಾದರೆ ಮಗಳ ಮೇಲೆ ಮೇಲೆ ಅತ್ಯಾಚಾರ ಮಾಡಬೇಕು ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ: 800 ಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ ಸ್ಪಿನ್ ಮಾಂತ್ರಿಕನಿಗೆ ಮಕ್ಕಳ್ ಸೆಲ್ವನ್ ಹೇಳಿದ್ದೇನು..?
ಈ ಟ್ವೀಟ್ಗೆ ನೆಟ್ಟಿಗರು ಹಾಗೂ ವಿವಿಧ ಸಮುದಾಯದ ಮುಖಂಡರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಅಕೌಂಟ್ ನ ಡಿಲೀಟ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮಗಳ ಮೇಲೆಯೂ ಕೂಡಾ ಅತ್ಯಾಚಾರ ಬೆದರಿಕೆ ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದು, ಗುಜರಾತ್ನಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು.