ETV Bharat / bharat

ಸ್ವಾತಂತ್ರ್ಯ ನಂತರ ಭಾರತದಲ್ಲಿ 755 ಮಂದಿಗೆ ಗಲ್ಲು... ನೇಣುಗಂಬಕ್ಕೆ ಕೊರಳೊಡ್ಡಿದವರ ಪಟ್ಟಿ ಹೀಗಿದೆ

ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಇಲ್ಲಿಯವರೆಗೆ 755 ಜನರನ್ನು ಮರಣ ದಂಡನೆಗೆ ಒಳಪಡಿಸಲಾಗಿದ್ದು,ಮರಣ ದಂಡನೆ ಶಿಕ್ಷೆ ನೀಡಿದ ಪ್ರಕರಣಗಳ ಬಗ್ಗೆ ಒಂದು ಸ್ಥೂಲ ನೋಟ ಇಲ್ಲಿದೆ.

ಮರಣ ದಂಡನೆ
death_penalty
author img

By

Published : Mar 20, 2020, 11:35 AM IST

ನವದೆಹಲಿ: ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕೊನೆಗೂ ಜಾರಿಯಾಗಿದೆ. ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವಿರಳಾತಿ ವಿರಳ ಪ್ರಕರಣಗಳಲ್ಲೊಂದು ಎಂಬುದಾಗಿ ಬಣ್ಣಿಸಲಾಗಿತ್ತು. ಹೀಗಾಗಿ ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಈ ಪ್ರಕರಣದ ತಾರ್ಕಿಕ ಅಂತ್ಯದ ಬಗ್ಗೆ ಕುತೂಹಲದಿಂದ ಕಾಯುತ್ತಿತ್ತು.

ಭಾರತದಲ್ಲಿ ತೀರಾ ಗಂಭೀರ ಅಪರಾಧಗಳಿಗೆ ಮಾತ್ರ ಮರಣದಂಡನೆಯನ್ನು ವಿಧಿಸಲಾಗುತ್ತದೆ. ಸ್ವಾತಂತ್ರ್ಯಾ ನಂತರ ಹಲವಾರು ಪ್ರಕರಣಗಳಲ್ಲಿ ಮರಣ ದಂಡನೆ ವಿಧಿಸಲಾಗಿದೆ. ಭಾರತದಲ್ಲಿ ಮರಣ ದಂಡನೆ ಶಿಕ್ಷೆ ನೀಡಿದ ಪ್ರಕರಣಗಳ ಬಗ್ಗೆ ಒಂದು ಸ್ಥೂಲ ನೋಟ ಇಲ್ಲಿದೆ.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮರಣ ದಂಡನೆ ಶಿಕ್ಷೆ ನಡೆದು ಬಂದ ಹಾದಿ

ಕುತ್ತಿಗೆಗೆ ನೇಣು ಬಿಗಿಯುವುದು ಹಾಗೂ ಗುಂಡು ಹಾರಿಸಿ ಸಾಯಿಸುವುದು ಹೀಗೆ ಎರಡು ರೀತಿಯಲ್ಲಿ ಮರಣ ದಂಡನೆ ಶಿಕ್ಷೆಯನ್ನು ಜಾರಿ ಮಾಡಲಾಗುತ್ತದೆ. ಭಾರತೀಯ ಅಪರಾಧ ದಂಡ ಸಂಹಿತೆಯ ಪ್ರಕಾರ ನೇಣಿಗೆ ಹಾಕುವ ಮೂಲಕ ಮರಣ ದಂಡನೆ ಶಿಕ್ಷೆ ಜಾರಿ ಮಾಡಲಾಗುತ್ತದೆ. ಆದರೆ 1950 ರ ಆರ್ಮಿ ಆ್ಯಕ್ಟ್​ ಪ್ರಕಾರ ಮಿಲಿಟರಿ ಕೋರ್ಟ್ ಮಾರ್ಶಲ್ ವಿಧಾನದಲ್ಲಿ ನೇಣಿಗೆ ಹಾಕುವುದು ಹಾಗೂ ಗುಂಡು ಹಾರಿಸಿ ಸಾಯಿಸುವುದು ಎರಡೂ ವಿಧಾನದ ಮರಣದಂಡನೆಯನ್ನು ಅನುಮೋದಿಸಲಾಗಿದೆ.

ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಇಲ್ಲಿಯವರೆಗೆ 755 ಜನರನ್ನು ಮರಣ ದಂಡನೆಗೆ ಒಳಪಡಿಸಲಾಗಿದೆ ಎಂದು ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಅಧ್ಯಯನ ತಿಳಿಸಿದೆ.

2015 ರ ಜುಲೈ 30 ರಂದು ಮುಂಬೈ ಬಾಂಬ್ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್​ ನನ್ನು ಗಲ್ಲಿಗೇರಿಸಲಾಗಿತ್ತು. ಅದಾಗಿ ಸುಮಾರು 5 ವರ್ಷಗಳ ನಂತರ ಈಗ 2020 ರ ಮಾ.20 ರಂದು ನಿರ್ಭಯಾ ಅಪರಾಧಿಗಳನ್ನು ನೇಣಿಗೇರಿಸಲಾಗಿದೆ.

ಯಾಕೂಬ್ ಮೆಮನ್​ಗೂ ಮುನ್ನ ಸಂಸತ್ ಭವನದ ಮೇಲಿನ ದಾಳಿಗೆ ಕಾರಣನಾಗಿದ್ದ ಮುಹಮ್ಮದ್ ಅಫ್ಜಲ್​ನನ್ನು 2013 ರ ಫೆ.8 ರಂದು, ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೊಹಮ್ಮದ್ ಅಜ್ಮಲ್ ಅಮೀರ ಕಸಾಬ್​ನನ್ನು 2012 ರ ನ.21 ರಂದು, 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಧನಂಜಯ್ ಚಟರ್ಜಿಯನ್ನು 2004 ರಲ್ಲಿ ಗಲ್ಲಿಗೇರಿಸಲಾಗಿತ್ತು. ಸರಣಿ ಕೊಲೆಗಳನ್ನು ಮಾಡಿದ ಅಪರಾಧಿ ಆಟೋ ಶಂಕರ್ ಉರ್ಫ್ ಗೌರಿ ಶಂಕರ್ ಎಂಬಾತನಿಗೆ 1995 ರಲ್ಲಿ ಗಲ್ಲು ಶಿಕ್ಷೆ ಜಾರಿಗೊಳಿಸಲಾಗಿತ್ತು.

ಯಾವೆಲ್ಲ ಅಪರಾಧಗಳಿಗೆ ಮರಣ ದಂಡನೆ?

ಉದ್ದೇಶಪೂರ್ವಕ ಕೊಲೆ, ವ್ಯಕ್ತಿಯ ಸಾವಿಗೆ ಕಾರಣವಾಗುವ ಯಾವುದೇ ಅಪರಾಧ, ಜನರ ಸಾವಿಗೆ ಕಾರಣವಾಗುವ ಭಯೋತ್ಪಾದಕ ಕೃತ್ಯಗಳು, ಸಾವಿಗೆ ಕಾರಣವಾಗದ ಭಯೋತ್ಪಾದನಾ ಕೃತ್ಯಗಳು, ಸಾವಿಗೆ ಕಾರಣವಾಗದ ಅತ್ಯಾಚಾರ, ಸಾವಿಗೆ ಕಾರಣವಾಗದ ಅಪಹರಣ, ಸಾವಿಗೆ ಕಾರಣವಾಗದ ಮಾದಕ ವಸ್ತುಗಳ ಸಾಗಣೆ, ಸಾವಿಗೆ ಕಾರಣವಾಗದ ದೇಶದ್ರೋಹ, ಗೂಢಚರ್ಯೆ ಮತ್ತು ಮಿಲಿಟರಿ ಅಪರಾಧ ಪ್ರಕರಣಗಳಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇಂಥ ಎಲ್ಲ ಪ್ರಕರಣಗಳಲ್ಲಿ ಮರಣ ದಂಡನೆಯನ್ನೇ ವಿಧಿಸಬೇಕೆಂದೇನೂ ಇಲ್ಲ.

ಅಪರಾಧಿ ಗರ್ಭಿಣಿಯಾಗಿದ್ದರೆ?

ಮರಣ ದಂಡನೆಗೊಳಗಾದ ಅಪರಾಧಿ ಒಂದೊಮ್ಮೆ ಗರ್ಭಿಣಿಯಾಗಿದ್ದಲ್ಲಿ ಗಲ್ಲು ಶಿಕ್ಷೆ ಜಾರಿಯನ್ನು ನ್ಯಾಯಾಲಯ ಮುಂದೂಡಬಹುದು ಅಥವಾ ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಬಹುದು.

ಕ್ಷಮಾದಾನ ಅರ್ಜಿ ಪ್ರಕ್ರಿಯೆ

ಅಪರಾಧಿಯೊಬ್ಬ ದಯಾ ಅರ್ಜಿ ಸಲ್ಲಿಸಬೇಕಾದರೆ ಆತನಿಗೆ ವಿಧಿಸಲಾದ ಮರಣ ದಂಡನೆ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿರಬೇಕು. ಮರಣ ದಂಡನೆಗೊಳಗಾದ ವ್ಯಕ್ತಿಯು ಮೊದಲಿಗೆ ಸುಪ್ರೀಂ ಕೋರ್ಟಿಗೆ ದಯಾ ಅರ್ಜಿ ಸಲ್ಲಿಸಬಹುದು. ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ತಿರಸ್ಕಾರವಾದರೆ ರಾಷ್ಟ್ರಪತಿಗಳಿಗೆ ಅಥವಾ ರಾಜ್ಯದ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಬಹುದು. ದೈಹಿಕ ನ್ಯೂನ್ಯತೆ, ವಯಸ್ಸು, ಕಾನೂನಿನ ಕ್ರೂರತೆ ಅಥವಾ ಕುಟುಂಬ ಸಾಕಬಲ್ಲ ಏಕೈಕ ವ್ಯಕ್ತಿ ಮುಂತಾದ ಕಾರಣಗಳನ್ನು ಮುಂದೆ ಮಾಡಿ ದಯಾ ಭಿಕ್ಷೆಯ ಅರ್ಜಿ ಸಲ್ಲಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.