ಹೈದರಾಬಾದ್: ಕೇರಳದಲ್ಲಿ ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇರೆಲ್ಲಾ ರಾಜ್ಯಗಳನ್ನು ಹೋಲಿಸಿದರೆ ಕೇರಳ ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮೀರುತ್ತಿದೆ. ಕೇರಳದಲ್ಲಿ ಇಂದು 6,036 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 5,173 ಜನರು ಗುಣಮುಖರಾಗಿದ್ದಾರೆ. ಒಟ್ಟು 72,891 ಸಕ್ರಿಯ ಪ್ರಕರಣಗಳಿದ್ದು, ಇಲ್ಲಿಯವರೆಗೆ 8,13,550 ಜನರು ಗುಣಮುಖರಾಗಿದ್ದಾರೆ.
ನೆರೆಯ ಆಂಧ್ರಪ್ರದೇಶವು ಇಂದು 158 ಹೊಸ ಪ್ರಕರಣಗಳನ್ನು ವರದಿ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ 155 ಜನ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 8,87,010 ಪ್ರಕರಣಗಳು ದಾಖಲಾಗಿದ್ದು, 8,78,387 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 7,147ಕ್ಕೆ ತಲುಪಿದ್ದು, 1,476 ಸಕ್ರಿಯ ಪ್ರಕರಣಗಳು ಇವೆ.
ಮಹಾರಾಷ್ಟ್ರದಲ್ಲಿ ಇಂದು 2,752 ಪ್ರಕರಣಗಳು ಪತ್ತೆಯಾಗಿದ್ದು, 1,743 ಮಂದಿ ಡಿಸ್ಟಾರ್ಜ್ ಆಗಿದ್ದಾರೆ. ಆದರೆ, 45 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 20,09,106 ಪ್ರಕರಣಗಳು ದಾಖಲಾಗಿದ್ದು, 19,12,264 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 50,785ಕ್ಕೆ ತಲುಪಿದ್ದು, ಒಟ್ಟು 44,831 ಸಕ್ರಿಯ ಪ್ರಕರಣಗಳು ದಾಖಲಾಗಿವೆ.
ಮಣಿಪುರದಲ್ಲಿಂದು 16 ಕೋವಿಡ್ ಪ್ರಕರಣಗಳು ದೃಢವಾಗಿದ್ದು, 11 ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 28,986 ಪ್ರಕರಣಗಳು ಪತ್ತೆಯಾಗಿದ್ದು, 28,416 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 369 ದಾಖಲಾಗಿದ್ದು, 201 ಸಕ್ರಿಯ ಪ್ರಕರಣಗಳು ವರದಿಯಾಗಿವೆ.
ಓದಿ: ಕೆಎಸ್‌ಆರ್‌ಟಿಸಿ ಬಸ್-ಕಾರು ಮುಖಾಮುಖಿ: ಮಹಿಳಾ PSI ಸೇರಿ ನಾಲ್ವರ ದುರ್ಮರಣ
ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 569 ಹೊಸ ಪ್ರಕರಣಗಳು ಕಂಡುಬಂದಿದ್ದು, 642 ಗುಣಮುಖರಾಗಿದ್ದಾರೆ. ಇಂದು 7 ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 8,34,740 ಪ್ರಕರಣಗಳು ಕಂಡುಬಂದಿದ್ದು, 8,17,520 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 12,316ಕ್ಕೆ ತಲುಪಿದ್ದು, 4,904 ಸಕ್ರಿಯ ಪ್ರಕರಣಗಳು ದಾಖಲಾಗಿವೆ.