ಮುಂಬೈ: ದೇಶಿ ಹಾಗೂ ಸಾಗರೋತ್ತರ ಷೇರುಪೇಟೆಗಳಲ್ಲಿ ನಕಾರಾತ್ಮಕ ವಾತಾವರಣ ಸೃಷ್ಟಿಯಾಗಿದ್ದರಿಂದ ಪೇಟೆಗಳಲ್ಲಿ ಇದರ ಪ್ರಭಾವ ಬೀರುತ್ತಿದ್ದು, ಒಂಬತ್ತನೇ ದಿನವೂ ಸೆನ್ಸೆಕ್ಸ್ ಕುಸಿತದ ಹಾದಿಯಲ್ಲಿದೆ.
ಋಣಾತ್ಮಕತೆ ಪ್ರಭೆಯಿಂದ ಲಕ್ಷಾಂತರ ಹೂಡಿಕೆದಾರರ ಕೋಟ್ಯಂತರ ರೂ. ಸಂಪತ್ತು ಕರಗುತ್ತಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಫೆಬ್ರವರಿ 7 ರಿಂದ15ರ ನಡುವಿನ ವಹಿವಾಟಿನಲ್ಲಿ 1,165 ಅಂಶಗಳಷ್ಟು ಕುಸಿತ ಕಂಡಿತ್ತು. ಈ ವಾರದ ಎರಡೂ ದಿನ ವಹಿವಾಟಿನಲ್ಲಿ ಮುಂಬೈ ಸೂಚ್ಯಂಕ 145 & 311 ಅಂಶಗಳು ಹಾಗೂ ನಿಫ್ಟಿ 83 & 36 ಅಂಶಗಳಷ್ಟು ಇಳಿಕೆ ಕಂಡಿದೆ. ಈ ಅವಧಿಯಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 5.75 ಲಕ್ಷ ಕೋಟಿ ಕರಗಿದೆ.
ಇಂದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತೋರಿಬಂದ ಧನಾತ್ಮಕತೆಯನ್ನು ಅನುಸರಿಸಿ ಮುಂಬೈ ಷೇರು ಪೇಟೆ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು ಸಾಧಿಸಿತು. ಇದೇ ಏರಿಕೆಯನ್ನು ಕಾಪಾಡಿಕೊಳ್ಳುವಲ್ಲಿ ಪೇಟೆ ವಿಫಲವಾಯಿತು.
ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 145.83 ಅಂಕಗಳ ಕುಸಿತದೊಂದಿಗೆ 35,352 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 36.60 ಅಂಕಗಳ ಹಿನ್ನೆಡೆಯೊಂದಿಗೆ 10,640 ಅಂಕಗಳ ಮಟ್ಟದಲ್ಲೂ ನಿರಾಶಾದಾಯಕವಾಗಿತು.
ಎಲ್&ಟಿ, ಎಂ&ಎಂ, ಒಎನ್ಜಿಸಿ, ಐಸಿಐಸಿಐ ಬ್ಯಾಂಕ್, ಎಸ್ಬಿಐಎನ್, ಟಾಟಾ ಸ್ಟೀಲ್ ಷೇರುಗಳ ಮೌಲ್ಯ ವೃದ್ಧಿಯಾಗಿದ್ದರೇ ಏಷ್ಯಾನ್ ಪೆಯಿಂಟ್ಸ್, ಕೋಲ್ ಇಂಡಿಯಾ, ಐಟಿಸಿ, ಕೋಟ್ಯಾಕ್ ಬ್ಯಾಂಕ್, ಪವರ್ ಗ್ರಿಡ್ ಷೇರುಗಳಲ್ಲಿ ಇಳಿಕೆ ಕಂಡವು.