ETV Bharat / bharat

ತಮಿಳುನಾಡಿನಲ್ಲಿ ಏಕಾಏಕಿ ಏರಿಕೆ ಕಾಣುತ್ತಿರುವ ಕೊರೊನಾ; ಇಂದು 527 ಹೊಸ ಕೇಸ್​!

ತಮಿಳುನಾಡಿನಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಏಕಾಏಕಿ ಏರಿಕೆ ಕಾಣುತ್ತಿದೆ. ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿಂದು 527 ಹೊಸ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,550ಕ್ಕೇರಿದೆ.

corona
ಕೊರೊನಾ
author img

By

Published : May 4, 2020, 8:15 PM IST

ಚೆನ್ನೈ: ನೆರೆಯ ತಮಿಳುನಾಡಿಲ್ಲಿ ಇಂದು 527 ಹೊಸ ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 3,550ಕ್ಕೆ ತಲುಪಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಸಂಜೆ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಇಂದು 30 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 1409 ಜನ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 2107 ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 31 ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 12,863 ಟೆಸ್ಟಿಂಗ್​ ನಡೆದಿದ್ದು, ಇಲ್ಲಿಯವರೆಗೆ 1,62,970 ಸ್ಯಾಂಪಲ್​ಗಳ ಟೆಸ್ಟಿಂಗ್​ ನಡೆದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.