ತಿರುಚಿ: ಇಲ್ಲಿನ ತಿರುವಂಕೋವಿಲ್ನ ಜಂಬುಕೇಶ್ವರ ದೇವಸ್ಥಾನದಲ್ಲಿ ಕಾಮಗಾರಿ ವೇಳೆ ಅಗೆಯುವಾಗ 1716 ಗ್ರಾಂ ತೂಕದ ಚಿನ್ನ ನಾಣ್ಯಗಳು ದೊರಕಿವೆ.
ತಿರುಚಿಯ ಈ ದೇವಾಲಯ 1800 ವರ್ಷಗಳ ಇತಿಹಾಸ ಹೊಂದಿದೆ. ಚೋಳರ ನಾಯಕ ಕೊಚ್ಚೆಂಗನನ್ ನಿರ್ಮಿಸಿದ ದೇವಾಲಯ ಎನ್ನಲಾಗಿದೆ. ದೇವಸ್ಥಾನದ ಆವರಣದಲ್ಲಿ ಕಾಮಗಾರಿ ನಡೆಯುತ್ತಿದ್ದಾಗ ಒಂದು ಸೀಲ್ ಆದ ಮಡಿಕೆ ಸಿಕ್ಕಿದೆ. ಅದನ್ನು ತೆರೆದು ನೋಡಿದಾಗ ಬರೋಬ್ಬರಿ 505 ಚಿನ್ನದ ನಾಣ್ಯಗಳಿದ್ದವು.
ಈ ನಾಣ್ಯಗಳ ಮೌಲ್ಯ 68 ಲಕ್ಷ ಎಂದು ಅಂದಾಜಿಸಲಾಗಿದೆ. ಪುರಾತ್ವ ಇಲಾಖೆಗೆ ಹೆಚ್ಚಿನ ಅಧ್ಯಯನಕ್ಕೆಂದು ಈ ನಾಣ್ಯಗಳನ್ನು ಹಸ್ತಾತರಿಸಲಾಗಿದೆ.
![505 gold coins fund in tamilnadu premises](https://etvbharatimages.akamaized.net/etvbharat/prod-images/6219114_thm.jpg)
ಈ ಕುರಿತು ಜಿಲ್ಲಾಡಳಿತಕ್ಕೆ ವಿಷಯ ತಿಳಿಸಲಾಗಿದ್ದು, ಶ್ರೀರಂಗಂ ತಹಶೀಲ್ದಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಾಣ್ಯದ ಮೇಲೆ ಕೆಲವು ಚಿಹ್ನೆಗಳಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಗುರುವಾರ ನಾಣ್ಯಗಳನ್ನು ಪರಿಶೀಲಿಸುವ ನಿರೀಕ್ಷೆ ಇದೆ.
ಸದ್ಯ ಚಿನ್ನದ ನಾಣ್ಯಗಳನ್ನು ಖಜಾನೆಯಲ್ಲಿ ಇಡಲಾಗಿದೆ.