ಗುರುದಾಸ್ಪುರ್ (ಪಂಜಾಬ್) : ಪಾಕಿಸ್ತಾನದಿಂದ ಕಳ್ಳದಾರಿಯ ಮೂಲಕ ಸಾಗಾಟ ಮಾಡಲಾಗುತ್ತಿದ್ದ 60 ಕೆ.ಜಿ ಹೆರಾಯಿನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಪತ್ತೆ ಹಚ್ಚಿದೆ.
ಪಂಜಾಬ್ನ ಡೇರಾ ಬಾಬಾ ನಾನಕ್ ಬಳಿಯ ರಾವಿ ನದಿಯಲ್ಲಿ ಪೈಪ್ನೊಳಗೆ ಹಾಕಿ ಹಗ್ಗದ ಸಹಾಯದಿಂದ ಭಾರತ ಗಡಿಯೊಳಗೆ ತೇಲಿ ಬಿಟ್ಟಿದ್ದ ಮಾದಕ ದ್ರವ್ಯವನ್ನು ಬಿಎಸ್ಎಫ್ನ 10ನೇ ಬೆಟಾಲಿಯನ್ ವಶಪಡಿಸಿಕೊಂಡಿದೆ. ಸೇನೆ ಪತ್ತೆ ಹಚ್ಚಿರುವ ಅತೀ ದೊಡ್ಡ ಕಳ್ಳ ಸಾಗಾಣಿಕೆಯಲ್ಲಿ ಇದು ಕೂಡ ಒಂದು ಎಂದು ಹೇಳಲಾಗ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಡಿಐಜಿ ರಾಜೇಶ್ ಶರ್ಮಾ, ಪಾಕಿಸ್ತಾನವು 60 ಪ್ಯಾಕೇಟ್ ಹೆರಾಯಿನ್ಅನ್ನು ಪ್ಲಾಸ್ಟಿಕ್ ಪೈಪ್ನಲ್ಲಿ ಹಾಕಿ ರವಿ ನದಿ ಮೂಲಕ ಡೇರಾ ಬಾಬಾ ನಾನಕ್ಗೆ ಸಾಗಿಸಲು ಯತ್ನಿಸುತ್ತಿತ್ತು. ಬಿಎಸ್ಎಫ್ ಸಿಬ್ಬಂದಿ ಈ ಅಕ್ರಮವನ್ನು ಪತ್ತೆ ಹಚ್ಚಿ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.