ನಾಗ್ಪುರ(ಮಹಾರಾಷ್ಟ್ರ): ಬಾಯ್ಲರ್ ಸ್ಫೋಟಗೊಂಡು ಐವರು ಮೃತಪಟ್ಟಿರುವ ಘಟನೆ ನಾಗ್ಪುರದ ಮಾನಸ್ ಆಗ್ರೋ ಇಂಡಸ್ಟ್ರೀಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಡೆಟ್ ಕಂಪನಿಯಲ್ಲಿಂದು ನಡೆದಿದೆ.
ಕಂಪನಿಯ ಬಯೋಗ್ಯಾಸ್ ಘಟಕದ ಬಳಿ ಇಂದು ಮಧ್ಯಾಹ್ನ 2.15ರ ಸುಮಾರಿಗೆ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಮಂಗೇಶ್ ಪ್ರಭಾಕರ್ ನೌಕರ್‌ಕರ್ (21), ಲಿಲಾಧಾರ್ ವಾಮನ್ ರಾವ್ ಶಿಂಧೆ (42), ವಾಸುದೇವೊ ಲಡಿ(30), ಸಚಿನ್ ಪ್ರಕಾಶ್ ವಾಗ್ಮೋರೆ (24) ಹಾಗೂ ಪ್ರಫುಲ್ ಪಾಂಡುರಂಗ ಮೂನ್ (25) ಎಂದು ಗುರುತಿಸಲಾಗಿದೆ. ಎಲ್ಲಾ ವಾಡ್ಗಾನ್ ಗ್ರಾಮದವರು ಎನ್ನಲಾಗಿದೆ.