ಹೈದರಾಬಾದ್: ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಹೈದರಾಬಾದ್‌ನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ)ದ ಅಧಿಕಾರಿಗಳು ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 5 ಕೆಜಿ ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ನಿರ್ಗಮನ ದ್ವಾರದ ಬಳಿ, ಇಂಡಿಗೊ ಏರ್‌ಲೈನ್ಸ್‌ನ ಒಬ್ಬ ಗ್ರಾಹಕ ಸೇವಾ ಅಧಿಕಾರಿಯನ್ನು ತಡೆದ ಅಧಿಕಾರಿಗಳು, ವಿದೇಶದಿಂದ ಪ್ಯಾಕೆಟ್‌ಗಳಲ್ಲಿ ಸುತ್ತಿ ತರಲಾಗುತ್ತಿದ್ದ 42 ತುಂಡು ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಬಿಸ್ಕೆಟ್ ರೂಪದಲ್ಲಿದ್ದ ಈ ಚಿನ್ನವನ್ನು, ಪೊಲೀಸರಿಗೆ ಅನುಮಾನ ಬಾರದಂತೆ ಪ್ರತಿಯೊಂದು ಬಿಲ್ಲೆಗಳನ್ನೂ ಪ್ಯಾಕ್ ಮಾಡಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಅಧಿಕಾರಿಗಳು ಚಿನ್ನಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣದಿಂದಾಗಿ ಚಿನ್ನವನ್ನು ವಶಪಡಿಸಲಾಗಿದೆ.
ಒಟ್ಟು 4891.200 ಗ್ರಾಂ ತೂಕದ ಶುದ್ಧ ಚಿನ್ನದ ಮೌಲ್ಯ 1,84,88,736/- ರೂ. ಯಾವುದೇ ದಾಖಲೆಗಳಿಲ್ಲದ ಕಾರಣ, ಗ್ರಾಹಕ ಕಾಯ್ದೆ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ.