ETV Bharat / bharat

ಅಸ್ಸೋಂನಲ್ಲಿ ಮಹಾಮಳೆ: ಸಂಕಷ್ಟಕ್ಕೆ ಸಿಲುಕಿದ 4 ಲಕ್ಷ ಜನ - undefined

ನಿರಂತರ ಮತ್ತು ಭಾರಿ ಮಳೆಯಿಂದಾಗಿ ಅಸ್ಸೋಂನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, 749 ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ. ಇದರಿಂದ 4 ಲಕ್ಷಕ್ಕೂ ಅಧಿಕ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಸ್ಸಾಂನಲ್ಲಿ ಮಳೆಯಿಂದಾಗಿ ಸೃಷ್ಟಿಯಾಗಿರುವ ಪ್ರವಾಹ.
author img

By

Published : Jul 12, 2019, 9:47 AM IST

ಅಸ್ಸೋಂ: ನಿರಂತರ ಮತ್ತು ಭಾರಿ ಮಳೆಯಿಂದಾಗಿ ಅಸ್ಸೋಂನಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಪರಿಣಾಮ ಇಲ್ಲಿನ ಜನರ ನೆಮ್ಮದಿಯ ಬದುಕು ಕಸಿದುಕೊಂಡಿದೆ. 749 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, 4 ಲಕ್ಷಕ್ಕೂ ಅಧಿಕ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರವಾಗಿ ಸುರಿದು ಪ್ರವಾಹ ಸೃಷ್ಟಿಸಿರುವ ಈ ಮಳೆಗೆ ಈಗಾಗಲೇ 6 ಮಂದಿ ಬಲಿಯಾಗಿದ್ದಾರೆ.

ಅಸ್ಸೋಂನ ಧೆಮಾಜಿ, ಲಖಿಂಪುರ, ಬೊಂಗೈಗಾನ್​ ಮತ್ತು ಬಾರ್ಪೇಟಾ ಜಿಲ್ಲೆಗಳು ಹೆಚ್ಚು ಹಾನಿಗೊಳಗಾಗಿವೆ. ಬ್ರಹ್ಮಪುತ್ರ ಸೇರಿದಂತೆ ರಾಜ್ಯದ ಐದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಹಾಮಳೆಯಿಂದ ರಾಜ್ಯದ 27 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಲ್ಲಿ749 ಹಳ್ಳಿಗಳು ಮತ್ತು ಸಾವಿರಾರು ಹೆಕ್ಟೇರ್​​​ ಕೃಷಿಭೂಮಿ ಮುಳುಗಡೆಯಾಗಿದೆ.

ಪ್ರಾಣದ ಹಂಗು ತೊರೆದು ರಕ್ಷಣೆಯಲ್ಲಿ ತೊಡಗಿರುವ ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ (ಎನ್​ಡಿಆರ್​ಎಫ್) ಈವರೆಗೂ 1800 ಮಂದಿಯನ್ನು ರಕ್ಷಿಸಿದೆ. ರಕ್ಷಿಸಿದ ಜನರನ್ನು ಪೀಡಿತ ಪ್ರದೇಶಗಳಲ್ಲಿ ನಿರ್ಮಿಸಿದ 53 ಶಿಬಿರಗಳಿಗೆ ಸ್ಥಳಾಂತರಿಸಿದ್ದಾರೆ. ಅಲ್ಲದೆ, ಎನ್​ಡಿಆರ್​ಎಫ್ ಪಡೆ ಇನ್ನೂ ಕಾರ್ಯಾಚರಣೆ ನಡೆಸುತ್ತಿದೆ.

ಅಸ್ಸೋಂನ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್​ ಅವರು ಎಲ್ಲ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಯಾವುದೇ ಸಾವು-ನೋವು ಸಂಭವಿಸದಂತೆ ಕ್ರಮ ಕೈಗೊಳ್ಳಿ. ಇನ್ನೂ ಹೆಚ್ಚಿನ ಮಟ್ಟದಲ್ಲಿ ರಕ್ಷಣಾ ಕಾರ್ಯ ಚುರುಕುಗೊಳಿಸಿ ಎಂದು ಅವರು ಸೂಚಿಸಿದ್ದಾರೆ. ಮಂಗಳವಾರದಿಂದ ಬಿಟ್ಟು ಬಿಟ್ಟದೆ ಮಳೆ ಸುರಿಯುತ್ತಿದೆ.

ಇನ್ನು ಅರುಣಾಚಲ ಪ್ರದೇಶದ ಭಾರತ ಮತ್ತು ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ತವಾಂಗ್​ನಲ್ಲಿ ಭೂಕುಸಿತ ಉಂಟಾಗಿ ಶಾಲೆಗೆ ಹೋಗುವ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

Intro:Body:

1 moh_jul_11_2019_security-41562851140077-0_1107email_1562851151_641.jpg   

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.