ETV Bharat / bharat

ನಿಜಾಮುದ್ದೀನ್ ಕಾರ್ಯಕ್ರಮ ಸೃಷ್ಟಿಸಿದ ಅನಾಹುತ: ಕಳೆದ 24 ಗಂಟೆಯಲ್ಲಿ 386 ಹೊಸ ಕೋವಿಡ್​ ಕೇಸ್

ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಸೋಂಕಿತರ ಸಂಖ್ಯೆ ಭಾರತದಲ್ಲಿ ಮತ್ತಷ್ಟು ಹೆಚ್ಚಾಗುತ್ತಿದೆ.

386 New COVID-19 cases in last 24 hours
386 New COVID-19 cases in last 24 hours
author img

By

Published : Apr 1, 2020, 6:07 PM IST

ನವದೆಹಲಿ: ಕಳೆದೆರಡು ದಿನಗಳಿಂದ ದೇಶದಲ್ಲಿ ಕೊರೊನಾ ವೈರಸ್​ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 386 ಹೊಸ ಪ್ರಕರಣ ಕಂಡು ಬಂದಿದ್ದು, ದೇಶದ ಜನರು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ.

ದೇಶದಲ್ಲಿ ಇಲ್ಲಿಯವರೆಗೆ ಪತ್ತೆಯಾದ ಸೋಂಕಿತ ಪ್ರಕರಣ- 1,637

ದೇಶದಲ್ಲಿ ಇದೀಗ ಒಟ್ಟು 1,637 ಕೋವಿಡ್​​ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಯಲ್ಲೇ 386 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್​ ಅಗರವಾಲ್​ ತಿಳಿಸಿದ್ದಾರೆ.

ಸೋಂಕಿತರ ಸಂಖ್ಯೆ ಹೆಚ್ಚಿಸಿದ ತಬ್ಲೀಜ್‌ ಕಾರ್ಯಕ್ರಮ:

ಇಲ್ಲಿಯವರೆಗೆ 38 ಜನರು ಸಾವನ್ನಪ್ಪಿದ್ದು, 132 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಗೋಚರಿಸಿದ್ದು, ಇದಕ್ಕೆ ದೆಹಲಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೇ ಕಾರಣ ಎಂದು ತಿಳಿಸಿದ್ದಾರೆ.

9 ಆಸ್ಪತ್ರೆಗಳಲ್ಲಿ 18 ಸಾವಿರ ಮಂದಿಗೆ ಕ್ವಾರಂಟೈನ್:

ದೆಹಲಿಯಲ್ಲಿ ನಡೆದ ನಿಜಾಮುದ್ದೀನ್​ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 18,000 ಜನರನ್ನು 9 ಆಸ್ಪತ್ರೆಗಳಲ್ಲಿ ಕ್ವಾರಂಟೈನ್​​ನಲ್ಲಿ ಇಡಲಾಗಿದೆ ಎಂದು ಅವರು ತಿಳಿಸಿದರು.

ಕ್ವಾರಂಟೈನ್‌ ಮತ್ತು ಐಸೋಲೇಷನ್‌ಗಾಗಿ ರೈಲು ಕೋಚ್‌ಗಳ ಬಳಕೆ:

ರೈಲ್ವೆಯಲ್ಲಿ 3.2 ಲಕ್ಷ ಕ್ವಾರಂಟೈನ್​ ಹಾಗೂ ಐಸೋಲೇಷನ್​​ ಸೆಂಟರ್​ ಓಪನ್​ ಮಾಡಲಾಗುತ್ತಿದೆ. ಅದಕ್ಕಾಗಿ 20,000 ಕೋಚ್​ ಬಳಕೆ ಮಾಡಲಾಗುತ್ತಿದೆ. ಇದೇ ವೇಳೆ 47,951 ಜನರನ್ನು ಟೆಸ್ಟ್​ ಮಾಡಲಾಗಿದ್ದು ಅದಕ್ಕಾಗಿ 126 ಲ್ಯಾಬ್ಸ್​ ಬಳಸುತ್ತಿದ್ದೇವೆ. 51 ಖಾಸಗಿ ಲ್ಯಾಬ್​ ಕೂಡ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೂಲಿ ಕಾರ್ಮಿಕರಿಗೆ ಪ್ರತ್ಯೇಕ ರಿಲೀಫ್‌ ಕ್ಯಾಂಪ್‌:

ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು 21,486 ರಿಲೀಫ್​ ಕ್ಯಾಂಪ್​ ತೆರೆಯಲಾಗಿದ್ದು, ಅದರೊಳಗೆ 6,75,133 ಜನರಿಗೆ ಆಶ್ರಯ ಒದಗಿಸಲಾಗುತ್ತಿದೆ. ಎಲ್ಲ ರೀತಿಯ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದು ವಿವರಿಸಿದರು.

ಕೇಜ್ರಿವಾಲ್​ ಸುದ್ದಿಗೋಷ್ಠಿ:

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಕೊರೊನಾ ವೈರಸ್​ ಶಂಕೆಯಿಂದ 766 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರಲ್ಲಿ 120 ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ನಿಜಾಮುದ್ದೀನ್‌ ಪ್ರದೇಶದ ತಬ್ಲೀಜ್‌ ಧಾರ್ಮಿಕ ಸಮಾರಂಭದಲ್ಲಿ ಭಾಗಿಯಾಗಿದ್ದವರು ಎಂದು ಅವರು ತಿಳಿಸಿದ್ದಾರೆ.

ಇದರ ಜತೆಗೆ 1,810 ಜನರನ್ನು ಐಸೋಲೇಷನ್​​ನೊಳಗೆ ಇಡಲಾಗಿದ್ದು, ಎಲ್ಲರ ಮೇಲೂ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 10 ಲಕ್ಷ ಬಡವರಿಗೆ ರೇಷನ್​ ಕಾರ್ಡ್​ ಇಲ್ಲ. ಸರ್ಕಾರದ ಇ-ವೆಬ್​ಸೈಟ್​ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವಂತೆ ಅವರು ಇದೇ ವೇಳೆ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.