ETV Bharat / bharat

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಉತ್ತರಪ್ರದೇಶ ಮೂಲದ ಮೂವರು ಅರೆಸ್ಟ್​ - special train

ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಮೂವರು ಆರೋಪಿಗಳ ಬಂಧನವಾದರೆ, ಇನ್ನೂ ಮೂವರು ಉತ್ತರಪ್ರದೇಶಕ್ಕೆ ಪರಾರಿಯಾಗಿದ್ದಾರೆ. ಲಾಕ್​​​ಡೌನ್​​ ವೇಳೆ ವಿಶೇಷ ರೈಲಿನ ಮೂಲಕ ಉತ್ತರಪ್ರದೇಶಕ್ಕೆ ತೆರಳಿರುವ ಆರೋಪಿಗಳ ಶೋಧ ಕಾರ್ಯ ಮುಂದುವರಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

3 UP natives held for rape of a 14 year old girl in Ernakulam
ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ: ಉತ್ತರಪ್ರದೇಶ ಮೂಲದ ಮೂವರ ಬಂಧನ
author img

By

Published : Aug 25, 2020, 12:00 PM IST

ಎರ್ನಾಕುಲಂ (ಕೇರಳ): ಇಲ್ಲಿನ ಮಂಜುಮಾಲ್​​​ನಲ್ಲಿ ನಡೆದಿದ್ದ 16ವರ್ಷದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಶಾಯಿದ್, ಫರ್ಹದ್ ಖಾನ್ ಮತ್ತು ಹನೀಫಾ ಬಂಧಿತ ಆರೋಪಿಗಳಾಗಿದ್ದು, ಇನ್ನೂ ಮೂವರು ರಾಜ್ಯದಿಂದ ಪಲಾಯನಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂವರು ಲಾಕ್​​​​​ಡೌನ್ ವೇಳೆ ವಲಸೆ ಕಾರ್ಮಿಕರಿಗಾಗಿ ನಿಯೋಜಿಸಿದ್ದ ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಆರೋಪಿಗಳು ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಮನೆಯ ಬಳಿಯಲ್ಲಿಯೇ ವಾಸವಿದ್ದು, ಆಕೆ ಗೆಳೆತನ ಗಳಿಸಿದ್ದರು. ಬಳಿಕ ಬಾಲಕಿಯನ್ನು ಬೆದರಿಸಿ ಹಲವು ದಿನಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಅಪ್ರಾಪ್ತೆಯ ಪೋಷಕರು ದೆಹಲಿಯಲ್ಲಿ ವಾಸಿಸುತ್ತಿದ್ದು, ಬಾಲಕಿ ಸಂಬಂಧಿಕರ ಮನೆಯಲ್ಲಿದ್ದಳು. ಅಲ್ಲದೆ ಘಟನೆ ಬೆಳಕಿಗೆ ಬಂದ ಬಳಿಕ ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ ಹಿನ್ನೆಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.