ETV Bharat / bharat

ಪ್ರಧಾನಿ ಭೇಟಿಗೂ ಮುನ್ನ ಮನಾಲಿಯಲ್ಲಿ ಮೂರು ಪಿಸ್ತೂಲುಗಳು ವಶ: ನಾಲ್ವರ ಬಂಧನ - ಹಿಮಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ

ಪ್ರಧಾನಿ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಮನಾಲಿಯಲ್ಲಿ ವ್ಯಕ್ತಿಯಿಂದ ಪರವಾನಿಗೆ ಇಲ್ಲದ ಪಿಸ್ತೂಲ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

3 revolver recovered from a car in Manali
ಪ್ರಧಾನಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಮನಾಲಿಯಲ್ಲಿ ಆಯುಧಗಳ ವಶ ; ನಾಲ್ವರ ಬಂಧನ
author img

By

Published : Sep 30, 2020, 4:17 PM IST

ಕುಲ್ಲು(ಹಿಮಾಚಲ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್‌ 3 ರಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಕುಲ್ಲು ಜಿಲ್ಲೆಯ ಮನಾಲಿಯಲ್ಲಿ ವ್ಯಕ್ತಿಯೊಬ್ಬರಿಂದ ಪರವಾನಿಗೆ ಇಲ್ಲದ ಪಿಸ್ತೂಲ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲ್ಲು ಜಿಲ್ಲೆಯ ಮನಾಲಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಅಟಲ್‌ ಸುರಂಗ ಮಾರ್ಗವನ್ನು ಉದ್ಘಾಟಿಸಲು ಲಹೌಲ್‌ ಕಣಿವೆಗೆ ನಮೋ ಆಗಮಿಸುತ್ತಿದ್ದಾರೆ. ಇದರ ಬೆನ್ನಲ್ಲೇ ವ್ಯಕ್ತಿ ಪರವಾನಿಗೆ ಇಲ್ಲದ ಪಿಸ್ತೂಲ್‌ ಇಟ್ಟುಕೊಂಡು ಓಡಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲ್ಲು ಎಸ್ಪಿ ಗೌರವ್‌ ಸಿಂಗ್‌, ಪ್ರಧಾನಿ ಮೋದಿ ಭೇಟಿ ಸಂಬಂಧ ಈವರೆಗೆ ಯಾವುದೇ ರೀತಿಯ ಶಂಕಿತ ಸಂಪರ್ಕ ಇರುವುದು ಬೆಳಕಿಗೆ ಬಂದಿಲ್ಲ. 37 ವರ್ಷದ ಬಲ್ಜೀತ್‌ ಸಿಂಗ್‌ ಎಂಬುವರಿಂದ ಪರವಾನಿಗೆ ಮುಗಿದಿರುವ ಪಿಸ್ತೂಲ್‌ ವಶಕ್ಕೆ ಪಡೆದಿದ್ದೇವೆ. ಈತ ಹರಿಯಾಣದ ಜಿಂದ್‌ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಸೆಕ್ಷನ್‌ 27 ಮತ್ತು 27ರ ಆಯುಧಗಳ ಕಾಯ್ದೆಯಡಿ ಮನಾಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದ್ದು, ತನಿಖೆ ಮುಂದುವರಿದೆ.

ಪ್ರಿನಿ ಎಂಬಲ್ಲಿ ಉದ್ಯಮಿಯೊಬ್ಬರ ಕಾರಿನಲ್ಲಿದ್ದ ಮೂವರು ರಿವಾಲ್ವರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಒಂದು ರಿವಾಲ್ವರ್‌ಗೆ ಪರವಾನಿಗೆ ಇಲ್ಲ ಎನ್ನಲಾಗಿದೆ. ಒಟ್ಟು ಮೂರು ಆಯುಧಗಳನ್ನು ಸೀಜ್‌ ಮಾಡಿ ನಾಲ್ವರನ್ನು ಬಂಧಿಸಿದ ಬಳಿಕ ಪೊಲೀಸರು ಹಾಗೂ ಭದ್ರತಾ ಪಡೆಗಳು ಹೈಅಲರ್ಟ್‌ ಆಗಿದ್ದು, ಎಲ್ಲೆಡೆ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.