ಮೇಷ
ಜನರು ನಿಮ್ಮ ಮುಂದೆ ಕೊಂಚ ತಲೆಬಾಗಿ ನಡೆಯುತ್ತಿದ್ದರೆ ನಿಮ್ಮ ಕಠಿಣ ಪರಿಶ್ರಮ ಫಲ ನೀಡಿದೆ ಎಂದು ಅರ್ಥ ಮಾಡಿಕೊಳ್ಳಿ. ಇಲ್ಲದಿದ್ದರೆ ನೀವು ಹೆಚ್ಚು ಸಂಘಟಿತರಾಗಬೇಕು. ಯಾವುದೇ ರೀತಿಯಲ್ಲಿಯೂ ಕೆಲಸ ಆಗುವಂತೆ ನೋಡಿಕೊಳ್ಳಿ.
ವೃಷಭ
ಜಬಾಬ್ದಾರಿಯುತ ಸ್ಥಾನದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಗೆ ಒಳ್ಳೆ ಮಾರ್ಗದರ್ಶನ ನೀಡುತ್ತೀರಿ. ಇದರೊಂದಿಗೆ ನೀವು ಯಶಸ್ಸು ಕಾಣಲಿದ್ದೀರಿ. ಯಾವುದೇ ಸಮಯದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಲಿದ್ದೀರಿ.
ಮಿಥುನ
ನಿಮ್ಮ ಆತ್ಮೀಯರೊಂದಿಗಿನ ಒಡನಾಟ ನಿಮಗೆ ಸಕಾರಾತ್ಮಕ ಮತ್ತು ಸಂತೋಷದ ಫಲಿತಾಂಶಗಳನ್ನು ತರಲಿದೆ. ಸಾರ್ವಜನಿಕ ಸೇವೆಯಲ್ಲಿರುವವರು ತಮ್ಮ ಮೇಲಧಿಕಾರಿಗಳು ಮತ್ತು ಕುಟುಂಬ ಸದಸ್ಯರಿಂದ ಅಗತ್ಯವಾಗಿರುವ ಉತ್ತೇಜನ ಪಡೆಯುತ್ತಾರೆ. ಶೈಕ್ಷಣಿಕವಾಗಿ, ನೀವು ನಿಮ್ಮ ಮನಸ್ಸಿನಲ್ಲಿ ಮೂಡುವ ಯಾವುದೇ ಸಮಸ್ಯೆಯನ್ನೂ ಪರಿಹರಿಸಲು ಶಕ್ತರಾಗುತ್ತೀರಿ.
ಕರ್ಕಾಟಕ
ನೀವು ಕೆಲಸದಲ್ಲಿ ಅತ್ಯಂತ ಚುರುಕಾಗಿದ್ದೀರಿ. ತಾತ್ಕಾಲಿಕವಾಗಿ ಗಮನ ಕಳೆದುಕೊಂಡರೂ ನಿಮ್ಮ ಮನಸ್ಸು ನಿಮ್ಮನ್ನು ನೈಜ ಜಗತ್ತಿಗೆ ಹಿಂದಕ್ಕೆ ತರುತ್ತದೆ. ನೀವು ಅತ್ಯಂತ ವೇಗವಾಗಿ ಕಠಿಣ ಶ್ರಮದಿಂದ ಕೆಲಸ ಮಾಡಲಿದ್ದೀರಿ. ಇದರಿಂದ ನಿಮ್ಮ ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ.
ಸಿಂಹ
ನೀವು ಪ್ರಯಾಣವನ್ನು ಇಷ್ಟಪಡುತ್ತೀರಿ. ಪ್ರವಾಸ ಅಥವಾ ಪ್ರಯಾಣ ಯೋಜಿಸಿ ಅದರಲ್ಲಿ ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಒಳಗೊಳ್ಳುತ್ತೀರಿ. ಕಲಾ ಕ್ಷೇತ್ರಗಳಲ್ಲಿ ಇರುವವರು ಅತ್ಯಂತ ಪ್ರಶಂಸೆ ಪಡೆಯುತ್ತೀರಿ. ಪ್ರಗತಿಯ ದಿನ ನಿಮಗಾಗಿ ಕಾಯುತ್ತಿದೆ.
ಕನ್ಯಾ
ನಿಮ್ಮ ಸಂಘಟನಾ ಸಾಮರ್ಥ್ಯ ದೋಷರಹಿತವಾಗಿದೆ. ಎಲ್ಲವನ್ನೂ ಸರಿಯಾಗಿ ಯೋಜಿಸಿ ಮುಂದುವರೆದರೆ ಯಶಸ್ಸು ನಿಮ್ಮದಾಗುತ್ತದೆ.
ತುಲಾ
ಇಂದು ನಿಮ್ಮ ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳು ವ್ಯಾಪಾರದಲ್ಲಿ ನಿಮ್ಮ ಯಶಸ್ಸನ್ನು ಕುರಿತು ಅಸೂಯೆ ಪಡುವಂತೆ ಮಾಡುತ್ತದೆ. ಅವರು ನಿಮ್ಮ ಪ್ರತಿಷ್ಠೆಯನ್ನು ನೋಯಿಸಲು ಅಥವಾ ಕುಂದಿಸಲು ಹಲವು ವಿಧಗಳಲ್ಲಿ ಪ್ರಯತ್ನಿಸಬಹುದು. ಅವರೊಂದಿಗೆ ಹೊಡೆದಾಡುವ ಜಾಣ್ಮೆ ಬಳಸಿ ವಿಷಯಗಳನ್ನು ಇತ್ಯರ್ಥಪಡಿಸಬಹುದು.
ವೃಶ್ಚಿಕ
ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನೀವು ಹೊಸ ವ್ಯಾಪಾರೋದ್ಯಮಕ್ಕೆ ಪ್ರವೇಶಿಸಿದಂತೆ ನಿಮ್ಮ ಪ್ರಯತ್ನಗಳಿಗೆ ಗೆಲುವು ದೊರೆಯುತ್ತದೆ. ನಿಮ್ಮ ವ್ಯಕ್ತಿತ್ವ ಎಲ್ಲರೂ ಗಮನಿಸುವಂತೆ ಮಾಡುತ್ತದೆ.
ಧನು
ಇಂದು ನಿಮ್ಮ ಕೋಪ ಮತ್ತು ನಿಮ್ಮ ನೋಟದಲ್ಲಿ ಸಂಪೂರ್ಣ ಬದಲಾವಣೆ ಕಾದಿದೆ. ಇಂದು ನೀವು ಎಲ್ಲರ ಕೇಂದ್ರ ಬಿಂದುವಾಗಿದ್ದೀರಿ. ಕೆಲವರು ನಿಮ್ಮನ್ನು ಅವರತ್ತ ಸೆಳೆಯಲು ಯತ್ನಿಸುತ್ತಾರೆ.
ಮಕರ
ವಿವಿಧ ಮೂಲಗಳಿಂದ ನಗದು ದೊರೆಯಲಿದೆ. ಆದರೆ, ನೀವು ಅದೆಲ್ಲವನ್ನೂ ಖರ್ಚು ಮಾಡುತ್ತೀರಿ. ನಿಮ್ಮ ಆದಾಯದೊಂದಿಗೆ ಖರ್ಚಿನ ಮೇಲೂ ನಿಯಂತ್ರಣವಿರಿಸಿ. ಕೆಲಸದಲ್ಲಿನ ಸನ್ನಿವೇಶಗಳು ಬಹಳ ಸಂಕೀರ್ಣವಾಗಬಹುದು.
ಕುಂಭ
ನೀವು ಗುರಿಗಳನ್ನು ಈಡೇರಿಸಿಕೊಳ್ಳುವ ವಿಧಾನ ಕುರಿತು ಮಹತ್ವಾಕಾಂಕ್ಷಿ ಮತ್ತು ಬಹಳ ಹೆಮ್ಮೆ ಪಡುತ್ತೀರಿ. ಅಗತ್ಯವಿದ್ದಲ್ಲಿ ಕಠಿಣ ಪರಿಶ್ರಮ ಪಡುತ್ತೀರಿ ಮತ್ತು ನಿಮ್ಮದೇ ದಾರಿಯನ್ನು ರೂಪಿಸಿಕೊಳ್ಳುತ್ತೀರಿ. ಇದಲ್ಲದೆ ನೀವು ಬಯಸಿದ್ದು ಈಡೇರಲು ಅಗತ್ಯವಾದ ಸಾಮರ್ಥ್ಯಗಳು ಮತ್ತು ದಕ್ಷತೆ ಇದೆ ಎನ್ನುವುದನ್ನು ದೃಢಪಡಿಸುತ್ತೀರಿ.
ಮೀನ
ನೀವು ಅತ್ಯಂತ ಸಣ್ಣ ಮತ್ತು ಕ್ಷುಲ್ಲಕ ಕಾರಣಗಳಿಗೆ ದುಃಖಿತರಾಗುವುದರ ಕುರಿತು ಎಚ್ಚರಿಕೆ ವಹಿಸಬೇಕು. ಹೊರಗಿನ ಪ್ರಭಾವಗಳಿಂದ ನಿರಾಸೆಯ ಆಲೋಚನೆಗಳು ದಾಳಿ ಇಡುತ್ತವೆ. ನೀವು ಸಕಾರಾತ್ಮಕವಾಗಿರಲು ಸ್ವಯಂ-ನಿಯಂತ್ರಣ ನೆರವಾಗುತ್ತದೆ.