ETV Bharat / bharat

ಸೇಡು ತೀರಿಸಿಕೊಂಡ ಭಾರತೀಯ ಸೇನೆ... ಹಿಜ್ಬುಲ್​ ಕಮಾಂಡೋ ಸೇರಿ ನಾಲ್ವರು ಉಗ್ರರು ಮಟಾಶ್​! - ಭಯೋತ್ಪಾದನೆ

ಕಳೆದ ಕೆಲ ದಿನಗಳಿಂದ ಗಡಿಯಲ್ಲಿ ಭಾರತೀಯ ಯೋಧರ ಗುರಿಯಾಗಿಸಿ ಗುಂಡಿನ ದಾಳಿ ನಡೆಸುತ್ತಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸೇನೆ ಉಗ್ರ ಸಂಘಟನೆ ಹಿಜ್ಬುಲ್​​ ಮುಜಾಹಿದ್ದೀನ್​ಗೆ ಸೇರಿದ್ದ ಇಬ್ಬರು ಉಗ್ರ ಕಮಾಂಡೋಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

2 militants killed in encounter
2 militants killed in encounter
author img

By

Published : May 6, 2020, 1:42 PM IST

Updated : May 6, 2020, 3:22 PM IST

ಅವಂತಿಪುರ್​(ಜಮ್ಮು-ಕಾಶ್ಮೀರ್​) : ಕಳೆದ ಕೆಲ ದಿನಗಳಿಂದ ಕಣಿವೆ ನಾಡು ಜಮ್ಮು - ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಇದರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ.

Hizbul Mujahideen's commander Riyaz
ಹಿಜ್ಬುಲ್​ ಮಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡೋ ರಿಯಾಜ್ ನೈಕೂ

ಇಂದು ಕೂಡ ಬೆಳ್ಳಂಬೆಳಗ್ಗೆ ಪುಲ್ವಾಮಾದ ಶರ್ಷಾಲಿ ಗ್ರಾಮದಲ್ಲಿ ಅಡಗಿ ಕುಳಿತುಕೊಂಡಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಯೋಧರು ಇಬ್ಬರು ಉಗ್ರರನ್ನ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದರ ಮಧ್ಯೆ ಹಿಜ್ಬುಲ್​ ಮಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡೋ ರಿಯಾಜ್ ನೈಕೂನನ್ನು​ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

ಇಬ್ಬರು ಉಗ್ರರ ಹೊಡೆದುರುಳಿಸಿದ ಯೋಧರು

ಇದರ ಮಧ್ಯೆ ಮತ್ತೊಂದು ಕಾರ್ಯಾಚರಣೆ ಪುಲ್ವಾಮಾದ ಬೀಘ್ಪೊರಾ ಪ್ರದೇಶದಲ್ಲೂ ನಡೆದಿದ್ದು, ಉಗ್ರ ಸಂಘಟನೆ ಹಿಜ್ಬುಲ್​​ ಮುಜಾಹಿದ್ದೀನ್​​ಗೆ ಸೇರಿದ್ದ ಇಬ್ಬರು ಪ್ರಮುಖ ಕಮಾಂಡೋಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಭಾರತೀಯ ಯೋಧರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಕರ್ನಲ್​, ಮೇಜರ್​ ಸೇರಿದಂತೆ ಐವರು ಯೋಧರು ಹುತಾತ್ಮರಾಗಿದ್ದರು. ಇದೀಗ ಭಾರತೀಯ ಯೋಧರು ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ.

Last Updated : May 6, 2020, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.