ಜೈಪುರ್ : ಜಗತ್ತಿನಾದ್ಯಂತ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳಿಗೆ ಅಭಾವವಿದೆ. ಅದರಲ್ಲಿಯೂ ಇದೀಗ ಕೊರೊನಾದಿಂದಾಗಿ ಇನ್ನಷ್ಟು ಕೊರತೆ ಉಂಟಾಗುವ ಸಾಧ್ಯತೆಯೂ ಇದೆ. ಇದರ ನಡುವೆಯೇ ರಾಜಸ್ಥಾನದ ಜೈಪುರದಲ್ಲಿರುವ ಎಸ್ಎಂಎಸ್ ಆಸ್ಪತ್ರೆಯಲ್ಲಿದ್ದ ₹10 ಕೋಟಿ ಮೌಲ್ಯದ 2.5 ಲಕ್ಷ ಸರ್ಜಿಕಲ್ ಮಾಸ್ಕ್ಗಳು ನಾಪತ್ತೆಯಾಗಿವೆ.
ಎಸ್ಎಂಎಸ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ನರ್ಸ್ಗಳು ಹಾಗೂ ಪ್ರತ್ಯೇಕ ಕೊಠಡಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಾಗಿ ಕೆಲ ದಿನಗಳ ಹಿಂದೆ 3 ಲಕ್ಷಕ್ಕೂ ಅಧಿಕ ಮಾಸ್ಕ್ಗನ್ನು ತರಿಸಲಾಗಿತ್ತು. ಕಾಣೆಯಾಗಿರುವ ಮಾಸ್ಕ್ಗಳು N-95 ಗುಣಮಟ್ಟದ್ದಾಗಿದ್ದವು. ಪ್ರತಿ ಮಾಸ್ಕ್ಗೆ 400 ರೂ. ಬೆಲೆಯಿದೆ.
ಈ ಕುರಿತು ವಕೀಲ ಮತ್ತು ಸಮಾಜ ಸೇವಕ ಪೂನಂ ಚಂದ್ ಭಂಡಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.