ವಿಶಾಖಪಟ್ಟಣ (ಆಂಧ್ರ ಪ್ರದೇಶ): ಇಲ್ಲಿನ ತಮ್ಮಡಪಲ್ಲಿ ಗ್ರಾಮದಲ್ಲಿ ಸ್ಥಳೀಯ ಉರಗ ತಜ್ಞ ಹಾಗೂ ಅರಣ್ಯಾಧಿಕಾರಿಗಳು 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿದ್ದು, ಬಳಿಕ ಅದನ್ನು ಚೆರುಕುಪಲ್ಲಿ ಮೀಸಲು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಚಿಡಿಕಡ ಮಂಡಲದ ತಮ್ಮಡಪಲ್ಲಿ ಗ್ರಾಮದ ರೈತರು ಕಾಳಿಂಗ ಸರ್ಪವನ್ನು ಕಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅರಣ್ಯಾಧಿಕಾರಿಗಳ ತಂಡ ತಕ್ಷಣ ಗ್ರಾಮಕ್ಕೆ ಬಂದಿದೆ.
"ಗ್ರಾಮಸ್ಥರಿಂದ ಹಾವು ಬಂದಿರುವ ವಿಷಯ ತಿಳಿದ ಕೂಡಲೇ ನಮ್ಮ ತಂಡದವರು ಹಳ್ಳಿಗೆ ತಲುಪಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ಹಾವನ್ನು ಚೆರುಕಪಲ್ಲಿ ಅರಣ್ಯಕ್ಕೆ ಬಿಡಲಾಗಿದೆ" ಎಂದು ವಿಶಾಖಪಟ್ಟಣ ಜಿಲ್ಲಾ ಅರಣ್ಯಾಧಿಕಾರಿ ಸಿ ಸೆಲ್ವಂ ಹೇಳಿದ್ದಾರೆ.
ಕಳೆದ 18 ತಿಂಗಳಿನಲ್ಲಿ 12 ಸರ್ಪಗಳು ವಿಶಾಖಪಟ್ಟಣದ ಅರಣ್ಯ ಪ್ರದೇಶದಲ್ಲಿ ಸಿಕ್ಕಿವೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.