ಜೈಪುರ್ (ರಾಜಸ್ಥಾನ): ಅಪರಿಚಿತ ವ್ಯಕ್ತಿವೋರ್ವ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಮುರಳೀಪುರ ಪ್ರದೇಶದ ಮದುವೆ ಮಂಟಪವೊಂದರ ಬಳಿ ನಡೆದಿದೆ.
ಸಂತ್ರಸ್ತೆ ಬಾಲಕಿ ಸಂಬಂಧಿಕರೊಂದಿಗೆ ನಿಶ್ಚಿತಾರ್ಥ ಕಾರ್ಯಕ್ರಮವೊಂದಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.