ETV Bharat / bharat

ಯಮುನಾ ನದಿಯಲ್ಲಿ ಮತ್ತೊಂದು ದೋಣಿ ದುರಂತ: ಬಾಲಕಿ ಸಾವು, ಇಬ್ಬರು ಕಣ್ಮರೆ - yamuna river boat capsize

ಉತ್ತರಪ್ರದೇಶದ ಬಾಗಪತ್ ಬಳಿ ಯಮುನಾ ನದಿಯಲ್ಲಿ ಮತ್ತೊಂದು ದೋಣಿ ದುರಂತ ಸಂಭವಿಸಿದೆ. ನದಿಯಲ್ಲಿ ಮುಳುಗಡೆಯಾಗಿದ್ದ ಸುಮಾರು 13 ಮಂದಿಯಲ್ಲಿ 10 ಜನರನ್ನು ರಕ್ಷಿಸಲಾಗಿದೆ.

1 killed, 10 rescued in Baghpat boat capsize
ಯಮುನಾ ನದಿಯಲ್ಲಿ ಮತ್ತೊಂದು ದೋಣಿ ದುರಂತ
author img

By

Published : Mar 13, 2020, 12:59 PM IST

ಬಾಗಪತ್ (ಉತ್ತರಪ್ರದೇಶ): ಇಲ್ಲಿನ ಬಾಗಪತ್ ಬಳಿ ಯಮುನಾ ನದಿಯಲ್ಲಿ ಸಂಭವಿಸಿದ್ದ ದೋಣಿ ದುರಂತದಲ್ಲಿ ಕಣ್ಮರೆಯಾಗಿದ್ದವರಲ್ಲಿ 10 ಜನರನ್ನು ರಕ್ಷಿಸಲಾಗಿದೆ. ಓರ್ವ ಬಾಲಕಿಯ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ.

ಹರಿಯಾಣದಿಂದ ಬರುತ್ತಿದ್ದ ದೋಣಿಯು ಬಾಗಪತ್ ಬಳಿಯ ಖಾದರ್ ಪ್ರದೇಶದಲ್ಲಿ ಮುಳುಗಿದೆ. ದೋಣಿಯಲ್ಲಿ 12ಕ್ಕೂ ಅಧಿಕ ಮಂದಿ ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದು, ಬಾಲಕಿಯ ಶವವನ್ನು ಹೊರ ತೆಗೆಯಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಸ್ಥಳಕ್ಕೆ ಡಿಎಂ ಶಕುಂತಲ ಗೌತಮ್ ಮತ್ತು ಎಸ್ಪಿ ಪ್ರತಾಪ್ ಗೋಪೇಂದ್ರ ಯಾದವ್ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರೆದಿದೆ. ದುರ್ಘಟನೆ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.