ನವದೆಹಲಿ : ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಭಾರತ್ ಬಯೋಟೆಕ್‌ನ ಮೂರನೇ ಹಂತದ ಪ್ರಯೋಗಗಳ ಡೇಟಾವನ್ನು ಪರಿಶೀಲಿಸಿದ ನಂತರ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಶೇಕಡಾ 77.8ರಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ಮೂಲದ ಕೋವಿಡ್ ಲಸಿಕೆ ಉತ್ಪಾದನಾ ಕಂಪನಿಯಾದ ಭಾರತ್ ಬಯೋಟೆಕ್ ಕೋವಾಕ್ಸಿನ್‌ನ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಂದ ವಾರಾಂತ್ಯದಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಡೇಟಾವನ್ನು ಸಲ್ಲಿಸಿತ್ತು.
ಕೋವಾಕ್ಸಿನ್‌ನ ಅನುಮೋದನೆಗಾಗಿ ವಿಶ್ವ ಆರೋಗ್ಯ ಸಂಸ್ಥೆ (WHO)ಯೊಂದಿಗೆ ಭಾರತ್ ಬಯೋಟೆಕ್‌ನ ಪೂರ್ವ-ಸಲ್ಲಿಕೆ ಸಭೆ ಬುಧವಾರ ನಡೆಯಲಿದೆ. ಪ್ರಸ್ತುತ ಭಾರತದಲ್ಲಿ ಬಳಸುತ್ತಿರುವ ಮೂರು ಲಸಿಕೆಗಳಲ್ಲಿ ಕೋವಾಕ್ಸಿನ್ ಕೂಡ ಒಂದು. ಅದರ ಲಸಿಕೆಯ ಮೂರನೇ ಹಂತದ ಡೇಟಾವನ್ನು ವಿವಿಧ ಬಾರಿ ಪ್ರಶ್ನಿಸಲಾಗಿದೆ ಮತ್ತು ಲಸಿಕೆಯ ಪರಿಣಾಮಕಾರಿತ್ವವನ್ನು ಕಂಡು ಹಿಡಿಯುವ ದತ್ತಾಂಶವು ನಿರ್ಣಾಯಕವಾಗಿಸುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸಹಯೋಗದೊಂದಿಗೆ ಕಂಪನಿಯು ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ : 'ಕೋವಿಡ್ ಲಸಿಕೆ ಕೊರತೆ ಆಗುವುದಿಲ್ಲ, ಮುಂದಿನ ತಿಂಗಳು 20-22 ಕೋಟಿ ಡೋಸ್ ಲಭ್ಯವಾಗಲಿದೆ'