ETV Bharat / bharat

ಒಮಿಕ್ರೋನ್ ವಿರುದ್ಧ ಕೆಲಸ ಮಾಡುತ್ತಾ ಕೋವ್ಯಾಕ್ಸಿನ್?... ಭಾರತ್ ಬಯೋಟೆಕ್​ ಅಧ್ಯಯನ

ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿದ ಕೋವ್ಯಾಕ್ಸಿನ್ ಲಸಿಕೆಯು ಹೊಸ ರೂಪಾಂತರಿ ಒಮಿಕ್ರೋನ್ ವಿರುದ್ಧ ಕೆಲಸ ಮಾಡುತ್ತಾ ಎಂಬ ಬಗ್ಗೆ ಅಧ್ಯಯನ ನಡೆದಿದೆ.

ಒಮಿಕ್ರೋನ್ ವಿರುದ್ಧ ಕೋವ್ಯಾಕ್ಸಿನ್,Bharat Biotech studying Covaxin's efficacy against Omicron
ಒಮಿಕ್ರೋನ್ ವಿರುದ್ಧ ಕೆಲಸ ಮಾಡುತ್ತಾ ಕೋವ್ಯಾಕ್ಸಿನ್
author img

By

Published : Dec 1, 2021, 12:58 AM IST

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕಳೆದ ವಾರ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ನ ಹೊಸ ರೂಪಾಂತರಿ 'ಒಮಿಕ್ರೋನ್' ವಿರುದ್ಧವೂ ಕೋವ್ಯಾಕ್ಸಿನ್ ಲಸಿಕೆ ಕೆಲಸ ಮಾಡುತ್ತದೆಯೇ ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿರುವುದಾಗಿ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಒಮಿಕ್ರೋನ್ ರೂಪಾಂತರಿ ವಿಶ್ವದಾದ್ಯಂತ ಭೀತಿ ಮೂಡಿಸಿದ್ದು, ಹಲವು ದೇಶಗಳು ವೈರಸ್ ಹರಡದಂತೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿವೆ. ಇನ್ನು ಈ ವೈರಸ್​ಗೆ ಕೋವಿಡ್ ಲಸಿಕೆಗಳು ಪರಿಣಾಮಕಾರಿಯಾಗುತ್ತದೆಯೇ ಎಂಬ ಅಧ್ಯಯನ ನಡೆದಿದೆ.

'ಸದ್ಯ ಇರುವ ಕೋವಿಡ್ ಲಸಿಕೆಗಳು ಈ ರೂಪಾಂತರಿ ವೈರಸ್​ ವಿರುದ್ಧ ಅಷ್ಟು ಪರಿಣಾಮಕಾರಿ ಆಗದಿರಬಹುದು ಎಂದು ಔಷಧ ತಯಾರಿಕಾ ಕಂಪನಿಯ ಮೊಡೆರ್ನಾ ಸಿಇಒ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ಒಮಿಕ್ರೋನ್​ಗೆ ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆ ಭಾರತ್ ಬಯೋಟೆಕ್ ಸಂಶೋಧನೆ ನಡೆಸಿದೆ.

ಕೋವಿಡ್​ಗೆ ರಾಮಬಾಣವಾಗಿ ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ 'ಕೋವ್ಯಾಕ್ಸಿನ್' ತಯಾರಿಸಿತ್ತು. ಈ ಲಸಿಕೆ ಡೆಲ್ಟಾ ಸೇರಿ ಕೋವಿಡ್​ನ ಇತರೆ ರೂಪಾಂತರಿ ವೈರಸ್​ ವಿರುದ್ಧವೂ ಪರಿಣಾಮಕಾರಿ ಕೆಲಸ ಮಾಡಿರುವುದು ಅಧ್ಯಯನದಿಂದ ತಿಳಿದಿದೆ. ಈ ಹೊಸ ರೂಪಾಂತರಿ ಮೇಲೆ ಲಸಿಕೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬ ಅಧ್ಯಯನ ಮಾಡುತ್ತಿದ್ದೇವೆ ಎಂದು ಈಟಿವಿ ಭಾರತಕ್ಕೆ ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.

ಕೋವಿಡ್ ವಿರುದ್ಧ ಕೋವ್ಯಾಕ್ಸಿನ್ ಶೇ.77.8 ರಷ್ಟು ಪರಿಣಾಮ ಬೀರಿದೆ. ಡೆಲ್ಟಾ ರೂಪಾಂತರಿ ವಿರುದ್ಧ ಈ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದೆ ಎಂದು ಲ್ಯಾನ್ಸೆಟ್ ಇನ್‌ಫೆಕ್ಷಿಯಸ್ ಡಿಸೀಸ್ ಜರ್ನಲ್‌ ನಡೆಸಿದ ಅಧ್ಯಯನ ವರದಿಯಲ್ಲಿ ದಾಖಲಾಗಿದೆ.

(ಇದನ್ನೂ ಓದಿ: ಕನ್ನಡಿಗನಿಗೆ ಜಾಕ್​ಪಾಟ್​​: 1 ಕೋಟಿಯಿಂದ 12 ಕೋಟಿ ರೂ.ಗೆ ರಿಟೈನ್​​ ಆದ​ ಮಯಾಂಕ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.