ಹೈದರಾಬಾದ್: ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಸೋಂಕಿನ ವಿರುದ್ಧ ಕೋವ್ಯಾಕ್ಸಿನ್ ಲಸಿಕೆಗೆ ತುರ್ತು ಬಳಕೆ ದೃಢೀಕರಣದ (ಇಯುಎಲ್) ಅನುಮೋದನೆ ನೀಡುವ ನಿರೀಕ್ಷೆ ಇದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಅಮೆರಿಕ, ಬ್ರೆಜಿಲ್ ಮತ್ತು ಹಂಗೇರಿ ಸೇರಿದಂತೆ 60ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೋವಾಕ್ಸಿನ್‌ನ ನಿಯಂತ್ರಣ ಅನುಮೋದನೆ ಪಡೆಯುವ ಪ್ರಕ್ರಿಯೆಯಲ್ಲಿದೆ ಎಂದು ಕಂಪನಿ ತಿಳಿಸಿದೆ.
ಇಯುಎಲ್‌ಗಾಗಿ ಅರ್ಜಿಯನ್ನು ಜಿನೀವಾದಲ್ಲಿ ಇರುವ ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ. ನಿಯಂತ್ರಕ ಅನುಮೋದನೆ 2021ರ ಜುಲೈ - ಸೆಪ್ಟೆಂಬರ್ ಅವಧಿಯಲ್ಲಿ ಬರುವ ನಿರೀಕ್ಷೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಗರ ಮೂಲದ ಲಸಿಕೆ ತಯಾರಕ ಕಂಪನಿಯು 13 ದೇಶಗಳಲ್ಲಿ ಇಯುಎ ಪಡೆದುಕೊಂಡಿದೆ. ಹೆಚ್ಚಿನ ದೇಶಗಳು ಕೋವಿಡ್-19 ವಿರುದ್ಧ ಈ ಲಸಿಕೆಯನ್ನು ಶಿಫಾರಸು ಮಾಡುತ್ತಿವೆ ಎಂದಿದೆ.