ಬೇತುಲ್ (ಮಧ್ಯಪ್ರದೇಶ): ವಿವಾಹ ಸಮಾರಂಭದಲ್ಲಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ದುರಂತವೊಂದು ನಡೆದಿದೆ. ಹಾಡಿಗೆ ತಕ್ಕಂತೆ ಉತ್ಸಾಹದಿಂದ ಖುಷಿ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿವೋರ್ವ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೃದಯವಿದ್ರಾವಕ ಘಟನೆ ಬೇತುಲ್ ಜಿಲ್ಲೆಯ ಡೋರಿ ಗ್ರಾಮದಲ್ಲಿ ಸಂಭವಿಸಿದೆ.
ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಸಡನ್ ಆಗಿ ನೆಲದ ಮೇಲೆ ಬಿದ್ದಿದ್ದಾನೆ. ಅಲ್ಲಿದ್ದವರು ಆತನಿಗೆ ಏನಾಯಿತು ಎಂಬುದನ್ನು ಅರಿಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕೆಲವರು ಆತ ಬಿದ್ದಾಗ ತಮಾಷೆ ಮಾಡುತ್ತಿದ್ದಾನೆಂದು ಅಂದುಕೊಂಡಿದ್ದಾರೆ. ಆದ್ರೆ ಯಾರೊಬ್ಬರು ಸಹ ಈತ ಮೃತಪಟ್ಟಿದ್ದಾನೆ ಎಂಬುದನ್ನು ಊಹೆ ಸಹ ಮಾಡಿರಲಿಲ್ಲ.
ಇದನ್ನೂ ಓದಿ: ಸೈನಿಕರ ಹತ್ಯೆ ಸೇರಿದಂತೆ ಕೆಲ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ನಕ್ಸಲ್ ನಾಯಕ ಅರೆಸ್ಟ್
ಬಳಿಕ ಆತನ ಕೆಲವು ಸ್ನೇಹಿತರು ಬಂದು ತಮಾಷೆ ಮಾಡಬೇಡ ಏಳು ಎನ್ನುತ್ತಿದ್ದರು. ಆದ್ರೆ ಆತ ಅಷ್ಟರಲ್ಲಿ ಸತ್ತು ಹೋಗಿದ್ದ. ತಕ್ಷಣ ಆತನನ್ನು ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ವೈದ್ಯರ ಪ್ರಕಾರ, ಆ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ