ಮುರ್ಶಿದಾಬಾದ್: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಮೇಲಿನ ದಾಳಿಗಳು ಮುಂದುವರಿದಿವೆ. ಇದೀಗ ಮುರ್ಶಿದಾಬಾದ್ನಲ್ಲಿ ಕಾರ್ಮಿಕ ಸಚಿವ ಜಾಕೀರ್ ಹುಸೇನ್ ಮೇಲೆ ಬಾಂಬ್ ದಾಳಿ ನಡೆದಿದೆ.
ಬುಧವಾರ ಕೋಲ್ಕತ್ತಾಗೆ ತೆರಳು ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಸಚಿವ ಜಾಕೀರ್ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ಸಚಿವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವರು ಖಂಡಿಸಿ, ಟ್ವೀಟ್ ಮಾಡಿದ್ದಾರೆ. ಹುಸೇನ್ ಅವರ ಒಂದು ಕೈ ಮತ್ತು ಕಾಲಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಅಧೀಕ್ಷಕರು ತಿಳಿಸಿದ್ದಾರೆ.
-
I condemn the dastardly bomb attack at Nimtita Railway Station in West Bengal. My prayers are for the quick recovery of the injured.
— Piyush Goyal (@PiyushGoyal) February 17, 2021 " class="align-text-top noRightClick twitterSection" data="
">I condemn the dastardly bomb attack at Nimtita Railway Station in West Bengal. My prayers are for the quick recovery of the injured.
— Piyush Goyal (@PiyushGoyal) February 17, 2021I condemn the dastardly bomb attack at Nimtita Railway Station in West Bengal. My prayers are for the quick recovery of the injured.
— Piyush Goyal (@PiyushGoyal) February 17, 2021
ಇದನ್ನೂ ಓದಿ: ಬಿಜೆಪಿ ನಾಯಕರ ಮೇಲೆ ಗ್ಯಾಂಗ್ ಅಟ್ಯಾಕ್!
ಇನ್ನೂ ಉತ್ತರ ಕೋಲ್ಕತ್ತಾದ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿಬಾಜಿ ಸಿಂಘ್ ರಾಯ್ ಸೇರಿದಂತೆ ಇತರ ನಾಯಕರ ಮೇಲೆ ಗುಂಪೊಂದು ದಾಳಿ ಮಾಡಿದರುವ ಘಟನೆ ಕೂಡ ನಡೆದಿದೆ. ಶಿಬಾಜಿ ಸಿಂಘ್ ರಾಯ್ ಅವರು ಘಟನೆಯಲ್ಲಿ ಗಾಯಗೊಂಡಿದ್ದಾರೆ.