ETV Bharat / bharat

ಪತ್ನಿ, ಪುತ್ರನಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.. ಅದೃಷ್ಟವಶಾತ್ ಬಾಲಕಿ ಪಾರು - ಹೆಂಡತಿ ಮಕ್ಕಳ ಮೇಲೆ ಸೀಮೆಎಣ್ಣೆ ಸುರಿದ ವ್ಯಕ್ತಿ

ತನ್ನ ಪತ್ನಿ. ಪುತ್ರನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ ತಾನೂ ಕೂಡ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Bengal man sets wife son self on fire
ಪತ್ನಿ, ಪುತ್ರನಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ
author img

By

Published : Nov 4, 2020, 9:43 AM IST

ಬರ್ಧಮನ್ (ಪಶ್ಚಿಮ ಬಂಗಾಳ): ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಉದ್ಯೋಗಿಯೊಬ್ಬ ಪತ್ನಿ, ನಾಲ್ಕು ವರ್ಷದ ಮಗನಿಗೆ ಬೆಂಕಿ ಹಚ್ಚಿ ತಾನೂ ಕೂಡ ಆತ್ಮ ಹತ್ಯೆಗೆ ಶರಣಾಗಿರವ ಘಟನೆ ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮನ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಆತನ 11 ವರ್ಷದ ಮಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 1 ಗಂಟೆ ಸುಮಾರಿಗೆ ಎಚ್ಚರಗೊಂಡ ತಂದೆ ಕುಟುಂಬ ಸದಸ್ಯರೆಲ್ಲರೂ ಇಂದು ಸಾಯಲಿದ್ದೇವೆ ಎಂದು ಹೇಳಿದರು ಅಂತ ಬಾಲಕಿ ಮಾಹಿತಿ ನೀಡಿದ್ದಾಳೆ.

ತಾನು ಸೀಮೆಎಣ್ಣೆ ಸುರಿದುಕೊಂಡಿದ್ದಲ್ಲದೇ ತನ್ನ ಹೆಂಡತಿ, ಮಗ ಮತ್ತು ಮಗಳ ಮೇಲೆ ಸುರಿದಿದ್ದಾನೆ. ಈ ವೇಳೆ ಬಾಲಕಿ ತಪ್ಪಿಸಿಕೊಂಡು ಬಂದಿದ್ದಾಳೆ. ಆದರೆ, ಆಕೆಯ ತಂದೆ, ತಾಯಿ ಮತ್ತು ತಮ್ಮ ಸುಟ್ಟು ಕರಕಲಾಗಿದ್ದಾರೆ. ಸುಮಾರು 3 ಗಂಟೆ ವೇಳೆಗೆ ಬಾಲಕಿ ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.