ಕೋಲ್ಕತಾ : ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ತಿಳಿಸಲು ರಾಜ್ಯ ಗೃಹ ಕಾರ್ಯದರ್ಶಿ ವಿಫಲರಾಗಿದ್ದಾರೆ ಎಂದು ಹೇಳಿರುವ ಗವರ್ನರ್ ಜಗದೀಪ್ ಧಂಖರ್, ಮುಖ್ಯ ಕಾರ್ಯದರ್ಶಿಯನ್ನು ತಮ್ಮನ್ನು ಭೇಟಿ ಮಾಡುವಂತೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಕೋಲ್ಕತಾ ಪೊಲೀಸ್ ಆಯುಕ್ತರ ವರದಿಗಳನ್ನು ಗೃಹ ಕಾರ್ಯದರ್ಶಿ ರವಾನಿಸಿಲ್ಲ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.
-
Such drifting of governance @MamataOfficial from constitutional prescriptions is unfortunate and cannot be overlooked. While the State passes through most severe post poll violence, there is just NO input to the constitutional head. This is least expected.
— Governor West Bengal Jagdeep Dhankhar (@jdhankhar1) May 8, 2021 " class="align-text-top noRightClick twitterSection" data="
">Such drifting of governance @MamataOfficial from constitutional prescriptions is unfortunate and cannot be overlooked. While the State passes through most severe post poll violence, there is just NO input to the constitutional head. This is least expected.
— Governor West Bengal Jagdeep Dhankhar (@jdhankhar1) May 8, 2021Such drifting of governance @MamataOfficial from constitutional prescriptions is unfortunate and cannot be overlooked. While the State passes through most severe post poll violence, there is just NO input to the constitutional head. This is least expected.
— Governor West Bengal Jagdeep Dhankhar (@jdhankhar1) May 8, 2021
"ರಾಜ್ಯದಲ್ಲಿ ಮತದಾನದ ಬಳಿಕ ಅತ್ಯಂತ ತೀವ್ರವಾಗಿ ಹಿಂಸಾಚಾರ ನಡೆದಿದ್ದರೂ, ಸಾಂವಿಧಾನಿಕ ಮುಖ್ಯಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ರಾಜ್ಯದಲ್ಲಿ ಈ ರೀತಿಯ ಬೆಳವಣಿಗೆ ದುರಾದೃಷ್ಟಕರ ಎಂದು ರಾಜ್ಯಪಾಲ ಜಗದೀಪ್ ಧಂಖರ್ ಹೇಳಿದ್ದಾರೆ.
ಚುನಾವಣೆ ಮುಗಿದ ನಂತರ ನಡೆದ ಹಿಂಸಾತ್ಮಕ ಘಟನೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ 16 ಜನರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವಾಲಯದ ನಾಲ್ಕು ಸದಸ್ಯರ ತಂಡವು ಬಂಗಾಳದಲ್ಲಿ ನಡೆದ ಚುನಾವಣಾ ನಂತರದ ಹಿಂಸಾಚಾರದ ಕಾರಣಗಳನ್ನು ಪರಿಶೀಲಿಸುವ ಸಲುವಾಗಿ ರಾಜಭವನದಲ್ಲಿ ಧಂಖರ್ ಅವರನ್ನು ಭೇಟಿ ಮಾಡಿತ್ತು.