ಕೋಲ್ಕತ: ಬುದ್ದಿವಂತಿಕೆ ಇದ್ರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ ನೋಡಿ. ಇಲ್ಲೋರ್ವ ವ್ಯಕ್ತಿ ಕೇವಲ ತ್ಯಾಜ್ಯ ವಸ್ತುಗಳನ್ನು ಬಳಸಿ ಸುಮಧುರ ಸಂಗೀತ ಹೊರ ಹೊಮ್ಮುವ ಉಪಕರಣಗಳನ್ನು ತಯಾರು ಮಾಡಿದ್ದಾರೆ.
ಹೌದು, ತ್ಯಾಜ್ಯದಿಂದ ಸಂಗೀತ ವಾದ್ಯಗಳನ್ನು ತಯಾರಿಸುವ ತನ್ನ ವಿಶಿಷ್ಟ ಪ್ರಯತ್ನದಲ್ಲಿ ಸೋಮ್ನಾಥ್ ಬಂಡೋಪಾಧ್ಯಾಯ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಕ್ಸಿಲೋಫೋನ್ ಎಂಬ ಸಂಗೀತ ಉಪಕರಣ ತಯಾರಿಸಿದ್ದು, ಅದ್ಭುತವಾಗಿ ನಾದ ಹೊಮ್ಮುತ್ತಿದೆ.
ತಂದೆಯೂ ಹೆಸರಾಂತ ಸಂಗೀತಕಾರ:
ಸೋಮನಾಥ್ ತಮ್ಮ ಕಾಲೇಜಿನ ಸ್ವಾಗತ ಕಾರ್ಯಕ್ರಮದಲ್ಲಿ ವಾದ್ಯಗಳನ್ನು ನುಡಿಸಿದ್ದರು. ನೈಸರ್ಗಿಕವಾಗಿ ಮರ ಮತ್ತು ಬಿದಿರಿನಿಂದ ತಯಾರಿಸಿದ ಉಪಕರಣಗಳು ಕೇಳುಗರ ಗಮನ ಸೆಳೆಯಿತಾದರೂ ಮರದ ಮತ್ತು ಬಿದಿರಿನಿಂದ ತಯಾರಿಸಿದ ಉಪಕರಣಗಳ ಪ್ರಯೋಗಗಳ ಬಗ್ಗೆ ಸೋಮನಾಥ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಬದಲಿಗೆ ಅವರು ಜೀವನದಲ್ಲಿ ಹೊಸ ರೀತಿಯ ಹೋರಾಟದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿದ್ದರು.
ಪ್ರತಿಭೆಗೆ ಪ್ರೋತ್ಸಾಹಿಸಿದ ಪತ್ನಿ:
ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿ ಗೀತಾ ಪತಿ ಪ್ರತಿಭೆಯನ್ನು ಪ್ರೋತ್ಸಾಹಿಸಿದವರಲ್ಲಿ ಮೊದಲಿಗರು. 2010ರಲ್ಲಿ ಪ್ರಮುಖ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲು ಆಕೆಯೇ ಮುಂದೆ ನಿಂತು ಸಹಾಯ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿ ಅವರು ಬಿದಿರಿನಿಂದ ತಯಾರಿಸಿದ ವಾದ್ಯಗಳನ್ನು ನುಡಿಸುತ್ತಿದ್ದಂತೆ ಕೇಳುಗರು ಮಂತ್ರಮುಗ್ಧಗೊಂಡಿದ್ದರಂತೆ.
ಅಂದಿನಿಂದ ಸಂಗೀತ ಕಾರ್ಯಕ್ರಮವು ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಪ್ರಸ್ತುತ ಇದು ಶ್ರೀರಾಂಪುರದ ಅತ್ಯಂತ ಜನಪ್ರಿಯ ಸಂಗೀತ ಕಾರ್ಯಕ್ರಮಗಳಲ್ಲಿ ಒಂದು.
ತ್ಯಾಜ್ಯದಲ್ಲಿ ಹೊಮ್ಮಿದ ಸ್ವರಗಳು:
ದೈನಂದಿನ ಜೀವನದಲ್ಲಿಯೂ ನಾವು ನಿಜವಾದ ಲಯವನ್ನು ಮರೆ ಮಾಡಲಾಗಿದೆ ಎಂದು ಒಂದು ಘಟನೆಯ ಮೂಲಕ ಇವರು ಅರಿತುಕೊಂಡಿದ್ದಾರೆ. 2016ರಲ್ಲಿ ಸಿರಾಮಿಕ್ ಟೈಲ್ಸ್‌ನ ಧ್ವನಿಯಲ್ಲಿ ಗುಪ್ತ ಲಯವನ್ನು ಕಂಡುಕೊಂಡರು. ಸೆರಾಮಿಕ್ ಟೈಲ್ಸ್ ನೆಲದ ಮೇಲೆ ಬೀಳುವ ಶಬ್ದ ನನಗೆ ಆಶ್ವರ್ಯ ಉಂಟು ಮಾಡಿತು. ನಾನು ಮತ್ತೆ ಟೈಲ್ಸ್ ಅನ್ನು ಕೆಲಗೆ ಇಡಲು ಕೆಲಸಗಾರನನ್ನು ಕೇಳಿದೆ. ಅವನಿಗೆ ಆಶ್ಚರ್ಯವಾಯಿತು. ಅಂದಿನಿಂದ ಈ ಹವ್ಯಾಸ ನನಗೆ ಆರಂಭವಾಯಿತು. ನಂತರ ನಾನು ಸೆರಾಮಿಕ್ನಲ್ಲಿ ಹೊಸ ಸಂಗೀತ ವಾದ್ಯವನ್ನು ರಚಿಸಿದೆ ಎಂದು ಸೋಮನಾಥ್ ತಮ್ಮ ಅನುಭವ ಹಂಚಿಕೊಂಡರು.