ETV Bharat / bharat

ಸಿನಿಮಾದಿಂದ ಸ್ಫೂರ್ತಿ ಪಡೆದು ಮಗಳಿಗೋಸ್ಕರ 107 ದ್ವಿಚಕ್ರ ವಾಹನ ಕದ್ದ ಅಪ್ಪ! - 107 ದ್ವಿಚಕ್ರ ವಾಹನ ಕದ್ದ ಕಳ್ಳ

ಒಂದಲ್ಲ, ಎರಡಲ್ಲ.. ಇಲ್ಲಿಯವರೆಗೆ ಸುಮಾರು 107 ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡಿರುವ ಕಳ್ಳನನ್ನು ಆಂಧ್ರದ ಕಾಕಿನಾಡ ಪೊಲೀಸರು ಬಂಧಿಸಿದ್ದಾರೆ. ಈತನ ಸ್ಟೋರಿ ಕೇಳಿದ ಪೊಲೀಸರೇ ಅರೆಕ್ಷಣ ದಂಗಾಗಿ ಬಿಟ್ಟರು.!

Became a thief for a daughter in Andra pradesh

author img

By

Published : Jun 28, 2022, 8:30 PM IST

ಕಾಕಿನಾಡ (ಆಂಧ್ರಪ್ರದೇಶ): ದ್ವಿಚಕ್ರ ವಾಹನ ಕಣ್ಣಿಗೆ ಬಿದ್ದರೆ ಸಾಕು, ಕ್ಷಣಮಾತ್ರದಲ್ಲಿ ಮಾಯ ಮಾಡಿ ಬಿಡ್ತಿದ್ದ. ಕದ್ದ ಬೈಕ್​ಗಳನ್ನು ಮಾರುವುದು ಈತನಿಗೆ ಬೆಣ್ಣೆಯಿಂದ ಕೂದಲು ತೆಗೆದಷ್ಟೇ ಸಲೀಸು. ಹೀಗೆ ಒಂದೆರಡಲ್ಲ ಇಲ್ಲಿಯವರೆಗೆ ಸುಮಾರು 107 ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡಿದ್ದಾನೆ. ಕೊನೆಗೂ ಈ ಐನಾತಿ ಕಿಲಾಡಿಯನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದಾಗ ಬಯಲಾಯ್ತು ಕುತೂಹಲಕಾರಿ ಸಂಗತಿ.!

ಎಲೇಶ್ವರದ ನಾಡಿಗಟ್ಲ ಕೃಷ್ಣನಿಗೆ ಇಬ್ಬರು ಹೆಣ್ಣುಮಕ್ಕಳು. ಅದರಲ್ಲೊಬ್ಬಳು ಹೆಣ್ಣು ಮಗು. ಆಕೆಗೆ ಕಿವಿ ಕೇಳಿಸದು, ಮಾತೂ ಬಾರದು. ಮಗಳ ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಲೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾನೆ. ಹೀಗೆ ಕೈಯಲ್ಲಿದ್ದ ಹಣವೆಲ್ಲವನ್ನೂ ಕಳೆದುಕೊಂಡ ಕೃಷ್ಣ, ಧೈರ್ಯ ಮಾತ್ರ ಕಳೆದುಕೊಳ್ಳಲಿಲ್ಲ. ಇಂಥ ಸಂದರ್ಭದಲ್ಲಿ ಆತನಿಗೆ ನೆನಪಾಗಿದ್ದೇ ತಾನು ಹಿಂದೊಮ್ಮೆ ನೋಡಿದ್ದ ಯಾವುದೋ ತೆಲುಗು ಸಿನಿಮಾ. ಈ ಸಿನಿಮಾದಲ್ಲಿ ಮಕ್ಕಳ ಚಿಕಿತ್ಸೆಗೋಸ್ಕರ ನಾಯಕ, ಶ್ರೀಮಂತರ ಮನೆ ಕಳ್ಳತನ ಮಾಡುವುದನ್ನು ತೋರಿಸಿದ್ದಾರೆ. ಈ ಪುಣ್ಯಾತ್ಮ ಅದನ್ನೇ ಚಾಚೂ ತಪ್ಪದೆ ಪಾಲಿಸುವ ದಾರಿ ಹಿಡಿದ!.

ಇದನ್ನೂ ಓದಿ: ಇವ ಸಾಧಾರಣ ಕಳ್ಳನಲ್ಲ ಬಿಡಿ.. ಸುಮಾರು 111 ಬೈಕ್​ಗಳನ್ನು ಕದ್ದು ಮಾರಿದ ಭೂಪ!

ಹೀಗೆ, ಮಗಳ ಚಿಕಿತ್ಸೆಗೋಸ್ಕರ ಹಿಡಿದ ಹಾದಿ ಕಳ್ಳತನ. 14 ತಿಂಗಳಲ್ಲಿ ಒಟ್ಟು 107 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾನೆ. ಕಳೆದ ಏಪ್ರಿಲ್ ತಿಂಗಳಲ್ಲಿ ಕೃತ್ಯ ಶುರು ಮಾಡಿದ ಈತ ಆಂಧ್ರದ ಪೂರ್ವ ಗೋದಾವರಿ, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ವಿಶಾಖಪಟ್ಟಣ, ಸೀತಾರಾಮರಾಜ್​ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಬೈಕುಗಳನ್ನು ಕದ್ದಿದ್ದಾನೆ. ಕದ್ದ ಬೈಕ್​​ಗಳನ್ನು ಜಗ್ಗಂಪೇಟೆ ಮಂಡಲದ ವೀರಬಾಬು ಎಂಬಾತನಿಗೆ ಮಾರಾಟ ಮಾಡುತ್ತಿದ್ದ. ಇದೀಗ ಕೊಟ್ಟ ಈಬದ್ರ ಈಸ್ಕೊಂಡ ಕೋಡಂಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧನಕ್ಕೊಳಗಾದ ನಾಡಿಗಟ್ಲ ಕೃಷ್ಣನನ್ನು ವಿಚಾರಿಸಿದಾಗ, ಆತ ಅಸಲಿ ಕಥೆ ವಿವರಿಸಿದ್ದಾನೆ.!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.