ನವದೆಹಲಿ: ಅಕ್ಟೋಬರ್ 2021 ರಲ್ಲಿ ನವರಾತ್ರಿ, ದಸರಾ ಸೇರಿದಂತೆ ಅನೇಕ ಹಬ್ಬಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ 21 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ.
ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ವಿಜಯ ದಶಮಿ, ಈದ್ ಮಿಲಾದ್, ವಾಲ್ಮೀಕಿ ಜಯಂತಿ ಸೇರಿದಂತೆ ಹಲವು ಸರ್ಕಾರಿ ರಜೆಗಳಿವೆ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್ಗಳಿಗೆ ಅನ್ವಯವಾಗಲಿವೆ.
ಬ್ಯಾಂಕ್ ರಜಾ ದಿನಗಳು:
- ಅಕ್ಟೋಬರ್ 1: ಹಣಕಾಸು ವರ್ಷದ ಮಧ್ಯಭಾಗದ ರಜೆ(ಕೇವಲ ಗ್ಯಾಂಗ್ಟಾಕ್‌ನಲ್ಲಿ ಮಾತ್ರ)
- ಅಕ್ಟೋಬರ್ 2: ಗಾಂಧಿ ಜಯಂತಿ
- ಅಕ್ಟೋಬರ್ 3: ಭಾನುವಾರ
- ಅಕ್ಟೋಬರ್ 6: ಮಹಾಲಯ ಅಮಾವಾಸ್ಯೆ (ಅಗರ್ತಲಾ, ಬೆಂಗಳೂರು, ಕೋಲ್ಕತಾ)
- ಅಕ್ಟೋಬರ್ 7: ಮೀರಾ ಚೌರೆನ್ ಹೌಬಾ ಸನಮಾಹಿ(ಇಂಪಾಲ್)
- ಅಕ್ಟೋಬರ್ 9: ಎರಡನೇ ಶನಿವಾರ
- ಅಕ್ಟೋಬರ್ 10: ಭಾನುವಾರ
- ಅಕ್ಟೋಬರ್ 12: ದುರ್ಗಾ ಪೂಜಾ(ಮಹಾ ಸಪ್ತಮಿ)ಅಗರ್ತಲಾ, ಕೋಲ್ಕತಾ)
- ಅಕ್ಟೋಬರ್ 13: ದುರ್ಗಾ ಪೂಜಾ(ಮಹಾ ಸಪ್ತಮಿ)(ಅಗರ್ತಲಾ, ಭುವನೇಶ್ವರ, ಗ್ಯಾಂಗ್ಟಾಕ್, ಗುವಾಹಟಿ, ಇಂಫಾಲ್, ಕೋಲ್ಕತಾ, ಪಾಟ್ನಾ, ರಾಂಚಿ)
- ಅಕ್ಟೋಬರ್ 14: ದುರ್ಗಾ ಪೂಜಾ/ದಸರಾ/ಮಹಾ ನವಮಿ/ಆಯುಧಾ ಪೂಜಾ(ಅಗರ್ತಲಾ, ಬೆಂಗಳೂರು, ಚೆನ್ನೈ, ಗ್ಯಾಂಗ್ಟಾಕ್, ಗುವಾಹಟಿ, ಕಾನ್ಪುರ, ಕೊಚ್ಚಿ, ಕೋಲ್ಕತಾ, ಲಕ್ನೋ, ಪಾಟ್ನಾ, ರಾಂಚಿ, ಶಿಲ್ಲಾಂಗ್, ಶ್ರೀನಗರ, ತಿರುವನಂತಪುರಂ)
- ಅಕ್ಟೋಬರ್ 15: ದುರ್ಗಾ ಪೂಜಾ/ದಸರಾ/ ವಿಜಯ ದಶಮಿ(ಇಂಫಾಲ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲಾ ಬ್ಯಾಂಕುಗಳು)
- ಅಕ್ಟೋಬರ್ 16: ದುರ್ಗಾ ಪೂಜೆ (ದಾಸೈನ್) / (ಗ್ಯಾಂಗ್ಟಾಕ್)
- ಅಕ್ಟೋಬರ್ 17: ಭಾನುವಾರ
- ಅಕ್ಟೋಬರ್ 18: ಕಟಿ ಬಿಹು(ಗುವಾಹಟಿ)
- ಅಕ್ಟೋಬರ್ 19: ಈದ್ ಇ ಮಿಲಾದ್(ಅಹಮದಾಬಾದ್, ಬೇಲಾಪುರ, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ, ಕೊಚ್ಚಿ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ರಾಯ್‌ಪುರ್, ರಾಂಚಿ, ಶ್ರೀನಗರ, ತಿರುವನಂತಪುರಂ)
- ಅಕ್ಟೋಬರ್ 20: ವಾಲ್ಮೀಕಿ ಜಯಂತಿ, ಲಕ್ಷ್ಮೀ ಪೂಜೆ(ಅಗರ್ತಲಾ, ಬೆಂಗಳೂರು, ಚಂಡೀಘಡ, ಕೋಲ್ಕತಾ, ಶಿಮ್ಲಾ)
- ಅಕ್ಟೋಬರ್ 22: ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ)
- ಅಕ್ಟೋಬರ್ 23: ನಾಲ್ಕನೇ ಶನಿವಾರ
- ಅಕ್ಟೋಬರ್ 24: ಭಾನುವಾರ
- ಅಕ್ಟೋಬರ್ 26: ಆ್ಯಕ್ಸೆಶನ್ ಡೇ(ಜಮ್ಮು & ಕಾಶ್ಮೀರ)
- ಅಕ್ಟೋಬರ್ 31:ಭಾನುವಾರ