ನವದೆಹಲಿ : ಜೂನ್ ತಿಂಗಳು ಮುಗಿಯಲು ಇನ್ನೇನು ಕೇವಲ 3 ದಿನಗಳು ಮಾತ್ರ ಬಾಕಿ ಇವೆ. ಹೊಸ ತಿಂಗಳು ಜುಲೈ ತನ್ನೊಂದಿಗೆ ಹಲವಾರು ಬದಲಾವಣೆಗಳನ್ನು ತರಲಿದೆ. ಪ್ರತಿ ಬಾರಿಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ಜುಲೈ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯ ಪ್ರಕಾರ ಜುಲೈ ತಿಂಗಳಲ್ಲಿ ಅರ್ಧ ತಿಂಗಳು ಬ್ಯಾಂಕ್‌ಗಳು ಬಾಗಿಲು ಮುಚ್ಚಿರಲಿವೆ. ಆದರೆ ಆರ್ಬಿಐ ರಾಜ್ಯವಾರು ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ನೀಡುತ್ತದೆ. ಆಯಾ ರಾಜ್ಯದಲ್ಲಿ ಈ ರಜಾದಿನಗಳು ವಿಭಿನ್ನವಾಗಿರಬಹುದು. ಜುಲೈ ತಿಂಗಳಲ್ಲಿ ಯಾವೆಲ್ಲ ದಿನಗಳಂದು ಬ್ಯಾಂಕ್ ಮುಚ್ಚಿರಲಿವೆ ಎಂಬುದನ್ನು ನೋಡೋಣ.
2023ರ ಜುಲೈ ತಿಂಗಳಲ್ಲಿನ ಬ್ಯಾಂಕ್ ರಜಾದಿನಗಳು ಹೀಗಿವೆ:
ದಿನಾಂಕ | ದಿನ | ಕಾರಣ | ರಾಜ್ಯ |
02 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
05 ಜುಲೈ | ಬುಧವಾರ | ಗುರು ಹರಗೋವಿಂದ ಸಿಂಗ್ಜಿ ಜಯಂತಿ | ಜಮ್ಮು ಮತ್ತು ಕಾಶ್ಮೀರ |
06 ಜುಲೈ | ಗುರುವಾರ | ಎಂಎಚ್ಐಪಿ ದಿನ | ಮಿಜೋರಾಂ |
08 ಜುಲೈ | ಎರಡನೇ ಶನಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
09 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
11 ಜುಲೈ | ಮಂಗಳವಾರ | ಕೇರ ಪೂಜೆ | ತ್ರಿಪುರಾ |
13 ಜುಲೈ | ಗುರುವಾರ | ಭಾನು ಜಯಂತಿ | ಸಿಕ್ಕಿಂ |
16 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
17 ಜುಲೈ | ಸೋಮವಾರ | ಯೂ ತಿರೋಟ ಸಿಂಗ್ ಡೇ | ಮೇಘಾಲಯ |
21 ಜುಲೈ | ಶುಕ್ರವಾರ | ದೃಕ್ಪ್ಯಾ ತ್ಸೇ-ಜಿ | ಸಿಕ್ಕಿಂ |
22 ಜುಲೈ | ಶನಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
23 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
28 ಜುಲೈ | ಶುಕ್ರವಾರ | ಅಶೂರಾ | ಜಮ್ಮು ಮತ್ತು ಕಾಶ್ಮೀರ |
29 ಜುಲೈ | ಶನಿವಾರ | ಮೊಹರಮ್ | ಉತ್ತರ ಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಮಿಜೋರಾಂ, ತ್ರಿಪುರಾ, ಮಧ್ಯ ಪ್ರದೇಶ, ತಮಿಳುನಾಡು, ರಾಜಸ್ಥಾನ, ಪಿ. ಬಂಗಾಳ, ನವದೆಹಲಿ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ |
30 ಜುಲೈ | ರವಿವಾರ | ವಾರದ ರಜೆ | ಎಲ್ಲ ರಾಜ್ಯಗಳು |
RBI ನ ಸೈಟ್‌ನಲ್ಲಿ ಪಟ್ಟಿಯನ್ನು ಪರಿಶೀಲಿಸಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ರಜಾ ದಿನಗಳ ಪಟ್ಟಿಯನ್ನೂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. https://www.rbi.org.in/Scripts/HolidayMatrixDisplay.aspx ಕ್ಲಿಕ್ ಮಾಡುವ ಮೂಲಕ ಬ್ಯಾಂಕ್ ರಜಾದಿನಗಳ ಬಗ್ಗೆ ತಿಳಿದುಕೊಳ್ಳಬಹುದು.
ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಬಳಸಿಕೊಳ್ಳಿ: ಇಂಟರ್ನೆಟ್ ಬ್ಯಾಂಕಿಂಗ್ ಎಂದೂ ಕರೆಯಲ್ಪಡುವ ಆನ್‌ಲೈನ್ ಬ್ಯಾಂಕಿಂಗ್ ಕಳೆದ ದಶಕದಲ್ಲಿ ಹೆಚ್ಚು ಜನಪ್ರಿಯವಾಗಿದೆ. ನಿಮ್ಮ ಹಣಕಾಸಿನ ನಿಯಂತ್ರಣಕ್ಕಾಗಿ ಇದು ಉತ್ತಮ ಮಾರ್ಗವಾಗಿದೆ ಮತ್ತು ಪೇಮೆಂಟ್ಗಳ ಬಗ್ಗೆ ಅಪ್ಡೇಟ್ ಆಗಿರಲು ಇದು ಸುಲಭವಾದ ಮಾರ್ಗವಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ಎಂದರೆ ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಮೂಲಕ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸುವುದಾಗಿದೆ.
ಇದು ತ್ವರಿತವಾಗಿರುತ್ತದೆ ಮತ್ತು ಸಾಮಾನ್ಯವಾಗಿ ಉಚಿತವಾಗಿರುತ್ತದೆ. ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡದೆ ಅಥವಾ ಕರೆ ಮಾಡದೆಯೇ ಬಿಲ್‌ಗಳನ್ನು ಪಾವತಿಸುವುದು ಮತ್ತು ಹಣವನ್ನು ವರ್ಗಾಯಿಸುವಂತಹ ಕಾರ್ಯಗಳನ್ನು ಮಾಡಲು ಇದರಿಂದ ಸಾಧ್ಯವಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಿಂದ ಈ ಸೇವೆಗಳನ್ನು ಬಳಸಲು ಹಲವು ಬ್ಯಾಂಕ್‌ಗಳು ಉಚಿತ ಅಪ್ಲಿಕೇಶನ್‌ಗಳನ್ನು ಸಹ ಹೊಂದಿವೆ.
ನಿಮ್ಮ ಆನ್‌ಲೈನ್ ಖಾತೆಯನ್ನು ಸುರಕ್ಷಿತವಾಗಿಡಲು ಬ್ಯಾಂಕ್‌ಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಇವುಗಳು ಎನ್‌ಕ್ರಿಪ್ಟ್ ಮಾಡಿದ ವೆಬ್‌ಸೈಟ್‌ಗಳು, ಸಮಯ ಮೀರಿದ ಲಾಗ್ ಔಟ್‌ಗಳು ಮತ್ತು ಅನೇಕ ದೃಢೀಕರಣ ಪ್ರಕ್ರಿಯೆಗಳನ್ನು ಒಳಗೊಂಡಿವೆ. ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆ ಬಳಸುವುದು ಸಾಮಾನ್ಯವಾಗಿ ಸುರಕ್ಷಿತವಾಗಿದೆ.
ಇದನ್ನೂ ಓದಿ: Social Media: ಇನ್ಫ್ಲುಯೆನ್ಸರ್ಗಳಿಗೆ ಭಾರಿ ಬೇಡಿಕೆ; 2028ರ ವೇಳೆಗೆ 3.5 ಬಿಲಿಯನ್ ಡಾಲರ್ ವಹಿವಾಟು ನಿರೀಕ್ಷೆ