ಹೈದರಾಬಾದ್: ಜುಲೈ ತಿಂಗಳಲ್ಲಿ ಭಾರತದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದ ಎಲ್ಲಾ ಬ್ಯಾಂಕ್‌ಗಳು 15 ದಿನಗಳ ಕಾಲ ಮುಚ್ಚಲಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಹಬ್ಬ ಹರಿದಿನಗಳು ಮತ್ತು ಎರಡನೇ ಶನಿವಾರ, ಭಾನುವಾರ ಹಾಗೂ ನಾಲ್ಕನೇ ಶನಿವಾರ ಭಾನುವಾರ ಸೇರಿ ಒಟ್ಟು 15 ದಿನ ಬ್ಯಾಂಕ್‌ಗಳು ಬಂದ್ ಇರಲಿವೆ ಎಂದು ತಿಳಿಸಿದೆ.
ಜುಲೈ ತಿಂಗಳಲ್ಲಿ 9 ದಿನ ಹಬ್ಬಗಳಿದ್ದು ಆಗ ಬ್ಯಾಂಕ್ಗಳಿಗೆ ರಜೆ ಇರಲಿದೆ. ಹಾಗೆಯೇ ಉಳಿದ ರಜೆಗಳು ಎರಡನೇ ಶನಿವಾರ, ಭಾನುವಾರ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಸೇರಿವೆ. ಈ ದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕಾರ್ಯನಿರ್ವಹಿಸುತ್ತವೆ. ವಿವಿಧ ರಾಜ್ಯಗಳಲ್ಲಿ ಹಬ್ಬದ ರಜಾದಿನಗಳು ಬೇರೆ ಬೇರೆಯಾಗಿ ಇರಲಿವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಬ್ಯಾಂಕ್ ರಜಾದಿನಗಳ ವಿವರ..
- ಜುಲೈ 4, ಭಾನುವಾರ
- ಜುಲೈ 10, ಎರಡನೇ ಶನಿವಾರ
- ಜುಲೈ 11, ಭಾನುವಾರ
- ಜುಲೈ 18, ಭಾನುವಾರ
- ಜುಲೈ 24, ನಾಲ್ಕನೇ ಶನಿವಾರ
- ಜುಲೈ 25, ಭಾನುವಾರ
- ಜುಲೈ 12, ಸೋಮವಾರ
- ಜುಲೈ 13, ಮಂಗಳವಾರ
- ಜುಲೈ 14, ಬುಧವಾರ
- ಜುಲೈ 16, ಶುಕ್ರವಾರ
- ಜುಲೈ 17, ಶನಿವಾರ
- ಜುಲೈ 19, ಸೋಮವಾರ
- ಜುಲೈ 20, ಮಂಗಳವಾರ
- ಜುಲೈ 21, ಬುಧವಾರ
- ಜುಲೈ 31, ಶನಿವಾರ
ಇದನ್ನೂ ಓದಿ: ಕೊರೊನಾ ಸಂತ್ರಸ್ತರಿಗೆ ಪರಿಹಾರ: 6 ವಾರಗಳಲ್ಲಿ ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ