ನವದೆಹಲಿ: ಇಂದು ಬೆಳಗ್ಗೆ ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಇಂದು) ಶನಿವಾರ ಕೆಲವು ವಿಮಾನ ಹಾರಾಟಗಳ ಮೇಲೆ ಪ್ರತಿಕೂಲ ಹವಮಾನ ಪರಿಣಾಮ ಬೀರಿದೆ. ಇದರಿಂದ ವಿಮಾನ ನಿಲ್ದಾಣದ ಅಧಿಕಾರಿಗಳು ಜನರಿಗೆ ನವೀಕೃತ ವಿಮಾನ ಮಾಹಿತಿ ಪಡೆಯಲು ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.
ಉತ್ತರದಲ್ಲಿ ಹಠಾತ್ ಬದಲಾವಣೆಯ ಹವಾಮಾನದಿಂದ ಈಗ ಇರುವ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ. ಬಿಸಿಲಿನ ಝಳಕ್ಕೆ ಉತ್ತರ ಭಾರತದ ಮಂದಿ ನಲುಗಿ ಹೋಗಿದ್ದರು. ದೆಹಲಿಯಲ್ಲಿ ಮೊನ್ನೆ ದಾಖಲೆಯ ತಾಪಮಾನವು ಕಂಡು ಬಂದಿತ್ತು. ಇದೀಗ ವರುಣನ ಕೃಪೆಯಿಂದ ಜನರಿಗೆ ಅತಿಯಾದ ತಾಪಮಾನದಿಂದ ವಿರಾಮ ದೊರಕಿದಂತಾಗಿದೆ. ಇನ್ನು ಈ ಮೊದಲೇ ಭಾರತೀಯ ಹವಾಮಾನ ಇಲಾಖೆ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು.
ಎಲ್ಲೆಲ್ಲಿ ಸುರಿಯಲಿದೆ ಮಳೆ : ಮಧ್ಯಮ ತೀವ್ರತೆಯ ಮಳೆ-ಗುಡುಗು, ಧೂಳು ಸಹಿತ ಬಿರುಗಾಳಿ ಗಂಟೆಗೆ 40-70 ಕಿಮೀ ವೇಗದಲ್ಲಿ ದೆಹಲಿ, NCR (ಲೋನಿ ದೇಹತ್, ಹಿಂಡನ್ ಎಎಫ್ ಸ್ಟೇಷನ್, ಬಹದ್ದೂರ್ಗಢ್, ಘಾಜಿಯಾಬಾದ್, ಇಂದಿರಾಪುರಂ, ಛಾಪ್ರೌಲಾ, ಅಕ್ಕಪಕ್ಕದ ಪ್ರದೇಶಗಳಲ್ಲಿ ಸಂಭವಿಸುತ್ತದೆ. ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಮಾನೇಸರ್, ಬಲ್ಲಭಗಢ) ಯಮುನಾನಗರ, ಕುರುಕ್ಷೇತ್ರ, ಕೈತಾಲ್, ನರ್ವಾನಾ, ಕರ್ನಾಲ್, ರಾಜೌಂಡ್, ಅಸ್ಸಂದ್, ಸಫಿಡಾನ್, ಬರ್ವಾಲಾ, ಪಾಣಿಪತ್, ಆದಂಪುರ್, ಹಿಸ್ಸಾರ್, ಗೊಹಾನಾ, ಗನ್ನೌರ್, ಸಿವಾನಿ, ಮೆಹಮ್, ರೊಹ್ತ್ ತೋಕಸ್.
ಹಾಗೆ, ಖಾರ್ಖೋಡಾ, ಭಿವಾನಿ, ಚರ್ಖಿ ದಾದ್ರಿ, ಝಜ್ಜರ್, ಲೋಹರು, ಫರುಖ್‌ನಗರ, ಕೊಸಾಲಿ, ಮಹೇಂದರ್‌ಗಢ, ಸೋಹಾನಾ, ರೆವಾರಿ, ಪಲ್ವಾಲ್, ನರ್ನಾಲ್, ಬವಾಲ್, ನುಹ್, ಔರಂಗಾಬಾದ್, ಹೊಡಾಲ್ (ಹರಿಯಾಣ) ಗಂಗೋಹ್, ದಿಯೋಬಂದ್, ಶಾಮ್ಲಿ, ಮುಜಾಫರ್‌ನಗರ, ಕಂಧ್ಲೌತ್ ದೌರಾಲಾ, ಬಾಗ್‌ಪತ್, ಮೀರತ್, ಖೇಕ್ರಾ, ಮೋದಿನಗರ, ಕಿಥೋರ್, ಗಢಮುಕ್ತೇಶ್ವರ, ಪಿಲಾಖುವಾ, ಹಾಪುರ್, ಗುಲಾವೋಟಿ, ಸಿಯಾನ, ಸಿಕಂದರಾಬಾದ್, ಬುಲಂದ್‌ಶಹರ್, ಜಹಾಂಗೀರಾಬಾದ್, ಖುರ್ಜಾ, ಗಭಾನ, ಜತ್ತರಿ (ಯು.ಪಿ.) ಸಿಧ್‌ಮುಖ, ಪಿಲಾನಿ, ಭಿರಂಜುನು, ಜುರಾಂಜುನು, ಅಲ್ವಾರ್, ಮತ್ತು ವಿರಾಟ್‌ನಗರ (ರಾಜಸ್ಥಾನ)ದಲ್ಲಿ ಮುಂದಿನ 2 ಗಂಟೆಗಳಲ್ಲಿ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮಾತ್ರವಲ್ಲದೇ ಮುಂದಿನ ಎರಡು ಮೂರು ದಿನಗಳ ಕಾಲ ದೆಹಲಿಯಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಒಡಿಶಾ ಮತ್ತು ಉತ್ತರ ಭಾರತದಂತಹ ರಾಜ್ಯಗಳು ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನಕ್ಕೆ ಒಳಗಾಗಲಿವೆ ಎಂದು ಇಲಾಖೆ ಮೊದಲೇ ತಿಳಿಸಿದೆ.
ಇದನ್ನೂ ಓದಿ: ಮೊಬೈಲ್ಗಾಗಿ ಜಲಾಶಯದ ನೀರನ್ನೇ ಖಾಲಿ ಮಾಡಿಸಿದ ಅಧಿಕಾರಿಗೆ ಅಮಾನತು ಶಿಕ್ಷೆ