ETV Bharat / bharat

ಆತ್ಮಹತ್ಯೆಗೆ ಯತ್ನಿಸಿದ 'Baba Ka Dhaba' ಮಾಲೀಕ : ಆಸ್ಪತ್ರೆಗೆ ದಾಖಲು - ಬಾಬಾ ಕಾ ಡಾಬಾ ಲೇಟೆಸ್ಟ್​ ನ್ಯೂಸ್

ಲಾಕ್‌ಡೌನ್‌ನಿಂದಾಗಿ ಈ ಗೂಡಂಗಡಿಯನ್ನು ಮುಚ್ಚುವ ಕಠಿಣ ಪ್ರಸಂಗ ಬಂದೊದಗಿದ ಕಾರಣ ಕಾಂತಾ ಪ್ರಸಾದ್ ದಂಪತಿಗೆ ಎರಡು ಹೊತ್ತಿನ ಊಟ ಕೂಡ ಒಂದು ಗಂಭೀರ ಸಮಸ್ಯೆಯಾಗಿ ಕಾಡುತಿತ್ತು. ಅವರ ಗೋಳನ್ನು ಕಂಡ ಗೌರವ್​​,​ ಪ್ರಸಾದ್ ಬಗ್ಗೆ ಒಂದು ವಿಡಿಯೋ ಮಾಡಿದರು. ಕೊರೊನಾದಿಂದ ಬೀದಿ ಪಕ್ಕದ ತಮ್ಮ ಡಾಬಾ ಮುಚ್ಚಿಹೋದ ನಂತರ ತಾವು ಅನುಭವಿಸಿದ ನಷ್ಟ ಹಾಗೂ ತಮ್ಮ ಅಳಲನ್ನು ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್ ತೋಡಿಕೊಂಡಿದ್ದರು. ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್‌ ದಂಪತಿ, ಜನರ ಸಹಾಯ ಕೋರಿದ್ದರು..

Dhaba
Dhaba
author img

By

Published : Jun 18, 2021, 5:35 PM IST

ಹೈದರಾಬಾದ್ ​​: ಪ್ರಸಿದ್ಧ ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ನಿನ್ನೆ ರಾತ್ರಿ ಸಫ್ದರ್​ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಅತುಲ್ ಠಾಕೂರ್ ಮಾತನಾಡಿ, ಕಾಂತಾ ಪ್ರಸಾದ್ ಮದ್ಯ ಸೇವಿಸಿ ನಂತರ ನಿದ್ರೆ ಮಾತ್ರೆಗಳನ್ನು ನುಂಗಿದ್ದಾರೆ. ಪ್ರಜ್ಞಾಹೀನರಾಗಿ ತೀವ್ರ ಅಸ್ವಸ್ಥಗೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಸಾದ್​​ ಮಗನ ಹೇಳಿಕೆ ಪಡೆಯಲಾಗಿದೆ.

ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂದಿದ್ದ ಕಾಂತ ಪ್ರಸಾದ್ :

ಕಳೆದ ವರ್ಷ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಸಾದ್​​ ನನ್ನ ಗ್ರಾಹಕರಿಗೆ ನೋ ಎಂದು ಹೇಳಲು ಸಾಧ್ಯವಿಲ್ಲದ ಕಾರಣ ನನಗೆ ಯಾರಾದರೂ ಸಹಾಯ ಮಾಡಬೇಕಾಗಿದೆ. ಈ ವಯಸ್ಸಿನಲ್ಲಿ, ನಾನು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಈ ಮೊದಲು, ನಾನು 750 ಗ್ರಾಂ ಅಕ್ಕಿಯಿಂದ ತಯಾರಾದ ಅನ್ನವನ್ನು ಮಾರಾಟ ಮಾಡಲು ಹೆಣಗಾಡುತ್ತಿದ್ದೆ. ಆದರೆ, ಈಗ ನಾನು 5 ಕೆಜಿ ಅನ್ನವನ್ನು ಅರ್ಧ ದಿನದಲ್ಲಿ ಮಾರುತ್ತೇನೆ "ಎಂದು ಅವರು ಹೇಳಿದ್ದರು. ಬದುಕುಳಿಯಲು ಪ್ರಸಾದ್​​ ದಂಪತಿ ಮಾಡಿದ ಹೋರಾಟದ ಬಗ್ಗೆ ಸಂದರ್ಶನದಲ್ಲಿ ವಿವರಿಸದ್ದ ಅವರು, ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ, ಜನರು ಕಷ್ಟಗಳ ಮೂಲಕ ತಮ್ಮ ಬದುಕಿನ ದಾರಿ ಕಂಡುಕೊಳ್ಳಲು ಹೆಣಗಾಡಬೇಕು ಎಂದು ಅವರು ಹೇಳಿದ್ರು.

ನಾನು ಜೀವಂತವಾಗಿರುವವರೆಗೂ ಈ ಡಾಬಾವನ್ನು ನಡೆಸುತ್ತೇನೆ :

ತನ್ನ ಭವಿಷ್ಯಕ್ಕಾಗಿ ಇನ್ನೂ 20 ಲಕ್ಷ ರೂ. ನನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಸಾದ್ ಹೇಳಿದ್ರು. ಬದುಕಿರೋವರೆಗೂ ನಾನು ಈ ಡಾಬಾ ನಡೆಸುತ್ತೇನೆ. ನನ್ನ ಡಾಬಾದ ವ್ಯವಹಾರ ಪಾತಾಳ ತಲುಪಿದ ದಿನ ನಾನು ಇದನ್ನು ಮುಚ್ಚುತ್ತೇನೆ. ದೇಣಿಗೆ ರೂಪದಲ್ಲಿ ಪಡೆದ ಹಣದಲ್ಲಿ ನನಗೂ ನನ್ನ ಹೆಂಡತಿಗೂ 20 ಲಕ್ಷ ರೂಪಾಯಿಗಳನ್ನು ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದ್ದರು.

ಯೂಟ್ಯೂಬರ್​​ ಗೌರವ್ ವಾಸನ್ 'ಬಾಬಾ ಕಾ ಡಾಬಾ ಮಾಲೀಕರನ್ನು ಮುನ್ನೆಲೆಗೆ ತಂದರು :

ಯೂಟ್ಯೂಬರ್ ಹಾಗೂ ಫುಡ್ ಬ್ಲಾಗರ್ ಆದ ಗೌರವ್ ವಾಸನ್‌ ಅವರು ಕಾಂತಾ ಪ್ರಸಾದರ ಕಣ್ಣೀರ ಕಥೆಯನ್ನು ಯೂಟ್ಯೂಬ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಸಾಮಾಜಿಕ ಕಳಕಳಿಯಿಂದ ಇದಕ್ಕೆ ಸ್ಪಂದಿಸಿದ್ದರು. ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆ ಕಳೆದ ವರ್ಷ ಜಾರಿಗೊಳಿಸಲಾದ ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ಜನರು ತಮ್ಮ ಉದ್ಯೋಗ ಅವಕಾಶಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇಂತಹ ಕಠಿಣ ಸಮಯದಲ್ಲಿ ದಕ್ಷಿಣ ದೆಹಲಿಯ ಮಾಲವೀಯ ನಗರದ ರಸ್ತೆ ಪಕ್ಕದಲ್ಲಿ ಕಾಂತಾ ಪ್ರಸಾದ್ ಎಂಬ 80 ವರ್ಷದ ಒಬ್ಬ ವ್ಯಕ್ತಿ ಒಂದು ಚಿಕ್ಕ ಗೂಡಂಗಡಿಯನ್ನು ನಡೆಸುತ್ತಿದ್ದರು.

ಲಾಕ್‌ಡೌನ್‌ನಿಂದಾಗಿ ಈ ಗೂಡಂಗಡಿಯನ್ನು ಮುಚ್ಚುವ ಕಠಿಣ ಪ್ರಸಂಗ ಬಂದೊದಗಿದ ಕಾರಣ ಕಾಂತಾ ಪ್ರಸಾದ್ ದಂಪತಿಗೆ ಎರಡು ಹೊತ್ತಿನ ಊಟ ಕೂಡ ಒಂದು ಗಂಭೀರ ಸಮಸ್ಯೆಯಾಗಿ ಕಾಡುತಿತ್ತು. ಅವರ ಗೋಳನ್ನು ಕಂಡ ಗೌರವ್​​,​ ಪ್ರಸಾದ್ ಬಗ್ಗೆ ಒಂದು ವಿಡಿಯೋ ಮಾಡಿದರು. ಕೊರೊನಾದಿಂದ ಬೀದಿ ಪಕ್ಕದ ತಮ್ಮ ಡಾಬಾ ಮುಚ್ಚಿಹೋದ ನಂತರ ತಾವು ಅನುಭವಿಸಿದ ನಷ್ಟ ಹಾಗೂ ತಮ್ಮ ಅಳಲನ್ನು ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್ ತೋಡಿಕೊಂಡಿದ್ದರು. ಈ ವಿಡಿಯೋದಲ್ಲಿ ಕಾಂತಾ ಪ್ರಸಾದ್‌ ದಂಪತಿ, ಜನರ ಸಹಾಯ ಕೋರಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರು ಸಾಮಾಜಿಕ ಕಳಕಳಿಯಿಂದ ಇದಕ್ಕೆ ಸ್ಪಂದಿಸಿದರು. ದೆಹಲಿಯ ಎಷ್ಟೋ ಜನರು ಕಾಂತಾ ಪ್ರಸಾದ್ ಅವರ ‘ಬಾಬಾ ಕಾ ಡಾಬಾ’ ಈ ಗೂಡಂಗಡಿಯಿಂದ ಊಟವನ್ನು ಖರೀದಿಸಿದರು. ಹಾಗೆಯೇ ಸಾಕಷ್ಟು ಜನರು ಇ ವ್ಯಾಲೆಟ್‌ಗಳ ಮುಖಾಂತರ ಕಾಂತಾ ಪ್ರಸಾದ್ ಅವರಿಗೆ ಹಣ ಕಳುಹಿಸುವುದರ ಮೂಲಕ ಸಹಾಯ ಹಸ್ತವನ್ನು ನೀಡಿದರು. ಈ ಹಣದ ನೆರವಿನಿಂದಾಗಿ ಕಾಂತಾ ಪ್ರಸಾದ್ ಅವರು ತಮ್ಮ ಸ್ವಂತ ರೆಸ್ಟೋರೆಂಟ್ ಪ್ರಾರಂಭಿಸಿದರು. ಮತ್ತೆ ಮರುಕಳಿಸಿದ ಕೊರೊನಾದಿಂದಾಗಿ ಕಳೆದ ಫೆಬ್ರುವರಿ 15ರಂದು ಕಾಂತಾ ಪ್ರಸಾದ್ ಅವರು ಈ ರೆಸ್ಟೋರೆಂಟ್‌ನ ಮುಚ್ಚಬೇಕಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.