ETV Bharat / bharat

ನಡುರಸ್ತೆಯಲ್ಲೇ ಬಿ.ಟೆಕ್​ ವಿದ್ಯಾರ್ಥಿನಿಯ ಬರ್ಬರ ಹತ್ಯೆ!

ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನರೆಡ್ಡಿ ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ ರಮ್ಯಾ ಕುಟುಂಬಕ್ಕೆ ಸಹಾಯವಾಗಿ 10 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ. ಅವರಿಗೆ ಹೆಚ್ಚಿನ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ..

B tech student Killed brutally
ನಡುರಸ್ತೆಯಲ್ಲೇ ಬಿ.ಟೆಕ್​ ವಿದ್ಯಾರ್ಥಿನಿಯ ಬರ್ಬರ ಹತ್ಯೆ
author img

By

Published : Aug 15, 2021, 10:53 PM IST

ಗುಂಟೂರು(ಆಂಧ್ರಪ್ರದೇಶ): ಬಿ.ಟೆಕ್​ ಓದುತ್ತಿದ್ದ ಯುವತಿಯೋರ್ವಳನ್ನು ನಡುರಸ್ತೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಉಪಹಾರ ಸೇವನೆಗೆಂದು ಹೊರಟಿದ್ದ ಯುವತಿಗೆ, ಯುವಕನೋರ್ವ ಮನ ಬಂದಂತೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಬೈಕ್​ನಲ್ಲಿ ಪರಾರಿಯಾಗಿದ್ದಾನೆ.

ಘಟನೆಯ ಭೀಕರ ದೃಶ್ಯ ಘಟನಾ ಸ್ಥಳದ ಪಕ್ಕದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 4ನೇ ವರ್ಷದ ಬಿಟೆಕ್ ವಿದ್ಯಾರ್ಥಿನಿ ರಮ್ಯಾ ಕೊಲೆಗೀಡಾದ ಯುವತಿ. ಹಲ್ಲೆಗೊಳಗಾಗಿದ್ದ ಈಕೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಪ್ರಾಣಬಿಟ್ಟಿದ್ದಳು.

ಆರೋಪಿ ಬಂಧನ : ಘಟನೆ ಬಳಿಕ ಕಾರ್ಯಪ್ರವೃತ್ತರಾದ ಗುಂಟೂರು ನಗರ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರು ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಯು ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ಕೃತ್ಯಕ್ಕೆ ಕಾರಣ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

ಕುಟುಂಬಕ್ಕೆ ಸರ್ಕಾರದ ನೆರವು : ಮುಖ್ಯಮಂತ್ರಿ ವೈಎಸ್ ಜಗನ್​ ಮೋಹನರೆಡ್ಡಿ ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಉನ್ನತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಅಲ್ಲದೆ ರಮ್ಯಾ ಕುಟುಂಬಕ್ಕೆ ಸಹಾಯವಾಗಿ 10 ಲಕ್ಷ ರೂ.ಗಳನ್ನು ಘೋಷಿಸಿದ್ದಾರೆ. ಅವರಿಗೆ ಹೆಚ್ಚಿನ ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.