ETV Bharat / bharat

ವಿಮಾನ ಲ್ಯಾಂಡಿಂಗ್​ ವೇಳೆ ‘ಲೇಸರ್ ಲೈಟ್​ ಫ್ಲಾಶ್’ ಸಮಸ್ಯೆ.. ನಿಯಮ ತಿದ್ದುಪಡಿ ಮಾಡಿದ ಸಚಿವಾಲಯ - ನಾಗರಿಕ ವಿಮಾನಯಾನ ಸಚಿವಾಲಯ ಸುದ್ದಿ

ನಾಗರಿಕ ವಿಮಾನಯಾನ ಸಚಿವಾಲಯ 1937ರ ಏರ್​ಕ್ರಾಫ್ಟ್​ ನಿಯಮಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.

police action for flashing laser lights on aircraft  flashing laser lights on aircraft  police action for flashing laser lights on aircraft news  1937ರ ಏರ್​ಕ್ರಾಫ್ಟ್​ ನಿಯಮಗಳನ್ನು ತಿದ್ದುಪಡಿ  ಏರ್​ಕ್ರಾಫ್ಟ್​ ನಿಯಮಗಳನ್ನು ತಿದ್ದುಪಡಿ ಮಾಡಿದ ವಿಮಾನಯಾನ ಸಚಿವಾಲಯ  ನಾಗರಿಕ ವಿಮಾನಯಾನ ಸಚಿವಾಲಯ ಸುದ್ದಿ  ವಿಮಾನ ಲ್ಯಾಂಡಿಂಗ್​ ವೇಳೆ ಲೇಸರ್ ಲೈಟ್​ ಫ್ಲಾಶ್ ಸಮಸ್ಯೆ
ನಿಯಮ ತಿದ್ದುಪಡಿ ಮಾಡಿದ ಸಚಿವಾಲಯ
author img

By

Published : Jul 9, 2022, 12:03 PM IST

ನವದೆಹಲಿ: ದೇಶದ ಯಾವುದೇ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಆವರಣದಲ್ಲಿ ವಿಮಾನ ಹಾರಾಟ ಸಂದರ್ಭದಲ್ಲಿ ‘ಲೇಸರ್ ಲೈಟ್​ ಫ್ಲಾಶ್’ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಸ್ತಾಪಿಸಿದೆ. ಸಚಿವಾಲಯ ಹೊರಡಿಸಿರುವ ಜುಲೈ 6 ರ ಅಧಿಸೂಚನೆಯಲ್ಲಿ ವಿಮಾನ ನಿಯಮಗಳು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ತಿದ್ದುಪಡಿ ಪ್ರಕಾರ, ಲೇಸರ್ ಲೈಟ್ ಬಳಸುವ ವ್ಯಕ್ತಿಯ ಗುರುತು ಪತ್ತೆಯಾದ್ರೆ ಆತನಿಗೆ ಮೊದಲು ಕೇಂದ್ರ ಸರ್ಕಾರದ ಅಧಿಕಾರಿಯಿಂದ ನೋಟಿಸ್ ನೀಡಲಾಗುವುದು. ಆ ವ್ಯಕ್ತಿಯು ನೋಟಿಸ್​ ಸ್ವೀಕರಿಸಿದ 24 ಗಂಟೆಗಳ ಒಳಗೆ ಲೇಸರ್ ಲೈಟ್ ಅನ್ನು ಆಫ್ ಮಾಡಬೇಕು. ಇಲ್ಲವಾದಲ್ಲಿ ಅದನ್ನು ಸ್ವಿಚ್ ಆಫ್ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗುವುದು ಮತ್ತು ಆತನ ವಿರುದ್ಧ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ಸಹ ದಾಖಲಿಸಬಹುದು ಎಂದು ತಿಳಿಸಲಾಗಿದೆ.

ಓದಿ: ಲ್ಯಾಂಡಿಂಗ್​ಗಾಗಿ ಕೆಳಗಡೆ ಹಾರುತ್ತಿದ್ದ ವಿಮಾನ: ಪೈಲಟ್​​ ಕಣ್ಣಿಗೆ ತಗುಲಿದ ಲೇಸರ್‌ ಬೆಳಕು, ತಪ್ಪಿದ ಅನಾಹುತ

ವಿಮಾನ ನಿಲ್ದಾಣದ ಸುತ್ತ ಲೇಸರ್ ಲೈಟ್​ ಬಳಸುವ ವ್ಯಕ್ತಿಯನ್ನು ಗುರುತಿಸಲಾಗದಿದ್ದರೆ ಏರ್‌ಲೈನ್ ನಿರ್ವಾಹಕರು ಅಥವಾ ವಿಮಾನ ನಿಲ್ದಾಣ ನಿರ್ವಾಹಕರು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್​ನಲ್ಲಿ ಕನೂನು ಕ್ರಮ ಜರುಗಿಸಬಹುದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ವಿಮಾನಯಾನ ಸಚಿವಾಲಯದ ಪ್ರಕಾರ, ಮಧ್ಯಸ್ಥಗಾರರು ಮತ್ತು ಸಾರ್ವಜನಿಕರು ಆಗಸ್ಟ್ 6 ರವರೆಗೆ 1937ರ ಏರ್‌ಕ್ರಾಫ್ಟ್ ನಿಯಮಗಳು ಪ್ರಸ್ತಾವಿತ ತಿದ್ದುಪಡಿಗಳ ಕುರಿತು ತಮ್ಮ ಸಲಹೆಗಳನ್ನು ನೀಡಬಹುದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಹಲವಾರು ಪೈಲಟ್‌ಗಳು ತಮ್ಮ ವಿಮಾನಗಳು ಲ್ಯಾಂಡಿಂಗ್ ಮಾಡುವ ವೇಳೆ ಲೇಸರ್​ ಲೈಟ್​ನಿಂದ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಕೋಲ್ಕತ್ತಾ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ದೂರು ಬಂದಿದ್ದವು ಅಂತಾ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಈ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.