ETV Bharat / bharat

MLAs Assets: ದೇಶದ 4 ಸಾವಿರ ಶಾಸಕರ ಆಸ್ತಿ ಮೌಲ್ಯ ಈಶಾನ್ಯದ ಮೂರು ರಾಜ್ಯಗಳ ಬಜೆಟ್​ಗಿಂತಲೂ ಹೆಚ್ಚು! - MLAs Assets

ಜನಸೇವೆ ಮಾಡುವ ಜನಪ್ರತಿನಿಧಿಗಳು ಗಳಿಸಿದ ಆಸ್ತಿ ಈಶಾನ್ಯ ರಾಜ್ಯಗಳ ಬಜೆಟ್​ಗಿಂತಲೂ ಅಧಿಕವಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್​ಇಡಬ್ಲ್ಯೂ) ವರದಿಯಲ್ಲಿ ಈ ಮಾಹಿತಿ ಇದೆ.

ಶಾಸಕರ ಆಸ್ತಿ ಈಶಾನ್ಯದ ಮೂರು ರಾಜ್ಯಗಳ ಬಜೆಟ್
ಶಾಸಕರ ಆಸ್ತಿ ಈಶಾನ್ಯದ ಮೂರು ರಾಜ್ಯಗಳ ಬಜೆಟ್
author img

By

Published : Aug 1, 2023, 6:25 PM IST

ನವದೆಹಲಿ: ರಾಜ್ಯಗಳ ಬಜೆಟ್​ ಗಾತ್ರಕ್ಕಿಂತಲೂ ರಾಜಕಾರಣಿಗಳ ಸಂಪತ್ತೇ ಅಧಿಕವಾಗಿದೆ. ಇತ್ತೀಚೆಗೆ ಶಾಸಕರು ಹೊಂದಿದ್ದ ಆಸ್ತಿ ವಿವರ ಬಹಿರಂಗವಾಗಿದ್ದು, ಅದರಲ್ಲಿ ಕರ್ನಾಟಕದ ಕೆಲ ಶಾಸಕರು ದೇಶದಲ್ಲೇ ಅತ್ಯಧಿಕ ಶ್ರೀಮಂತ ರಾಜಕಾರಣಿಗಳು ಎಂದು ಗುರುತಿಸಿಕೊಂಡಿದ್ದರು. ಇದೀಗ ಮತ್ತೊಂದು ಮಾಹಿತಿಯಲ್ಲಿ ದೇಶದ ಹಾಲಿ 4001 ಶಾಸಕರ ಸಂಪತ್ತು ಈಶಾನ್ಯ ರಾಜ್ಯಗಳ ಬಜೆಟ್​ಗಿಂತಲೂ ಅಧಿಕ ಎಂಬ ಅಚ್ಚರಿಯ ಅಂಶ ಹೊರಬಿದ್ದಿದೆ.

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4,001 ಹಾಲಿ ಶಾಸಕರ ಒಟ್ಟು ಆಸ್ತಿ 54,545 ಕೋಟಿ ರೂ.ಗಳಾಗಿವೆ. ಇದು ನಾಗಾಲ್ಯಾಂಡ್, ಮಿಜೋರಾಂ ಮತ್ತು ಸಿಕ್ಕೀಂ ರಾಜ್ಯಗಳ 2023-24ರ ಸಾಲಿನ ವಾರ್ಷಿಕ ಬಜೆಟ್‌ಗಿಂತಲೂ ಹೆಚ್ಚಾಗಿದೆ. ಮೂರು ರಾಜ್ಯಗಳ ಒಟ್ಟು ಬಜೆಟ್​ ಗಾತ್ರ 49,103 ಕೋಟಿ ರೂ.ಗಳಾಗಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಕಳೆದ ಚುನಾವಣೆಗಳಲ್ಲಿ ಸ್ಪರ್ಧಿಸುವ ಮೊದಲು ಶಾಸಕರು ಸಲ್ಲಿಸಿದ ಅಫಿಡವಿಟ್‌ಗಳಿಂದ ಈ ಡೇಟಾವನ್ನು ಹೊರತೆಗೆಯಲಾಗಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್​ಇಡಬ್ಲ್ಯೂ) ಈ ವರದಿಯನ್ನು ಬಿಡುಗಡೆ ಮಾಡಿದೆ. ದೇಶದ 4,001 ಶಾಸಕರು ಕೋಟ್ಯಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 54,545 ಕೋಟಿ ರೂಪಾಯಿಗಳಾಗಿವೆ. ಇದು ಈಶಾನ್ಯದ ಮೂರು ರಾಜ್ಯಗಳ ಬಜೆಟ್​ ಗಾತ್ರಕ್ಕಿಂತಲೂ ಅಧಿಕವಾಗಿದೆ ಎಂದಿದೆ.

ನಾಗಾಲ್ಯಾಂಡ್‌ನ 2023-24 ರ ವಾರ್ಷಿಕ ಬಜೆಟ್ 23,086 ಕೋಟಿ ರೂಪಾಯಿ ಆಗಿದ್ದರೆ, ಮಿಜೋರಾಂ ಬಜೆಟ್​ 14,210 ಕೋಟಿ ರೂಪಾಯಿ ಮತ್ತು ಸಿಕ್ಕೀಂ ರಾಜ್ಯದ್ದು 11,807 ಕೋಟಿ ರೂಪಾಯಿ ಆಗಿದೆ. ರಾಷ್ಟ್ರದಾದ್ಯಂತ ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಶಾಸಕರ ನೀಡಿದ ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ವಿವರವನ್ನು ನಮೂದಿಸಿದ್ದು, ಇದರ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗಿದೆ ಎಂದು ವರದಿ ಹೇಳಿದೆ.

28 ರಾಜ್ಯ ವಿಧಾನಸಭೆಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 4,033 ಶಾಸಕರ ಪೈಕಿ ಒಟ್ಟು 4,001 ಶಾಸಕರ ಆಸ್ತಿ ವಿವರವನ್ನು ವಿಶ್ಲೇಷಿಸಲಾಗಿದೆ. ಇಷ್ಟೂ ಶಾಸಕರು 84 ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಶಾಸಕರನ್ನು ಒಳಗೊಂಡಿದೆ ಎಂದು ವರದಿಯಲ್ಲಿದೆ.

ಡಿಕೆಶಿ ಸಿರಿವಂತ ಶಾಸಕ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್​ಇಡಬ್ಲ್ಯೂ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ದೇಶದ ಅತಿ ಸಿರಿವಂತ ಶಾಸಕ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಎಂದು ದಾಖಲಿಸಿದೆ. ಅವರು 1413 ಕೋಟಿ ಆಸ್ತಿ ಹೊಂದುವ ಮೂಲಕ ರಾಷ್ಟ್ರದಲ್ಲೇ ಅತಿ ಹೆಚ್ಚು ಆಸ್ತಿ ಹೊಂದಿರುವ ಶಾಸಕ ಎಂದು ವರದಿಯಲ್ಲಿದೆ.

ಇದನ್ನೂ ಓದಿ: GST collection: ಜುಲೈ ತಿಂಗಳಲ್ಲಿ 1.65 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.