ETV Bharat / bharat

ಪಂಚ ರಾಜ್ಯಗಳ ಚುನಾವಣೆ: ನೇರ ಪ್ರಚಾರ, ರೋಡ್​ ಶೋಗಳಿಗೆ ಆಯೋಗದಿಂದ ಅನುಮತಿ!? - ಇಂದು ಚುನಾವಣಾ ಆಯೋಗದಿಂದ ಮಹತ್ವದ ಸಭೆ

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ಸೇರಿದಂತೆ ಪಂಚ ರಾಜ್ಯ ಚುನಾವಣೆಯಲ್ಲಿ ಕೋವಿಡ್ ಕಾರಣದಿಂದಾಗಿ ನೇರ ಪ್ರಚಾರ ಮತ್ತು ರೋಡ್ ಶೋಗಳ ಮೇಲೆ ವಿಧಿಸಲಾದ ನಿರ್ಬಂಧಗಳ ಬಗ್ಗೆ ಚುನಾವಣಾ ಆಯೋಗವು ಪರಿಶೀಲಿಸುತ್ತದೆ. ಚುನಾವಣಾ ಆಯೋಗವು ಷರತ್ತುಗಳೊಂದಿಗೆ ಚುನಾವಣಾ ಪ್ರಚಾರದಲ್ಲಿ ಸ್ವಲ್ಪ ಸಡಿಲಿಕೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ECI to hold review meeting  ban on physical rallies  roadshows tomorrow  Assembly Elections 2022  ಪಂಚ ರಾಜ್ಯಗಳ ಚುನಾವಣೆ 2022  ಇಂದು ಚುನಾವಣಾ ಆಯೋಗದಿಂದ ಮಹತ್ವದ ಸಭೆ  ಚುನಾವಣಾ ಆಯೋಗದಿಂದ ಕೋವಿಡ್​ ಸಡಲಿಕೆ
ಪಂಚ ರಾಜ್ಯಗಳ ಚುನಾವಣೆ
author img

By

Published : Jan 31, 2022, 1:18 PM IST

ನವದೆಹಲಿ: ಪಂಚ ಚುನಾವಣಾ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕಿಸಲು ಚುನಾವಣಾ ಆಯೋಗದ ಸಭೆ ಇಂದು ನಡೆಯಲಿದೆ. ಇಂದು ನಡೆಯಲಿರುವ ಸಭೆಯಲ್ಲಿ ನೇರ ಪ್ರಚಾರ ಮತ್ತು ರೋಡ್​ ಶೋಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕೋವಿಡ್ ಪ್ರಕರಣಗಳ ಹೆಚ್ಚಳವನ್ನು ಉಲ್ಲೇಖಿಸಿ ಚುನಾವಣಾ ಆಯೋಗವು ಜನವರಿ 8 ರಂದು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲಿ ನೇರ ಪ್ರಚಾರ ಮತ್ತು ರೋಡ್ ಶೋಗಳನ್ನು ನಿಷೇಧಿಸಿತ್ತು. ಜನವರಿ 22 ರಂದು ನಡೆದ ಕೊನೆಯ ಸಭೆಯಲ್ಲಿ ಆಯೋಗವು ಐದು ರಾಜ್ಯಗಳಲ್ಲಿ ನೇರ ಪ್ರಚಾರ ಮತ್ತು ರೋಡ್ ಶೋಗಳ ಮೇಲಿನ ನಿಷೇಧವನ್ನು ಜನವರಿ 31 ರವರೆಗೆ ವಿಸ್ತರಿಸಿತ್ತು.

ಓದಿ: ಬಜೆಟ್‌ 2022: ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ದೇಶದ ಅರ್ಧದಷ್ಟು ಜನರ ಒತ್ತಾಯ - ಸಮೀಕ್ಷೆ

ಮೊದಲ ಎರಡು ಹಂತದಲ್ಲಿ ಮತದಾನ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಗರಿಷ್ಠ 500 ಜನರ ಸಮ್ಮುಖದಲ್ಲಿ ಸಾರ್ವಜನಿಕ ಸಭೆ ನಡೆಸಲು ಆಯೋಗ ಅನುಮತಿ ನೀಡಿದ್ದು, ಮನೆ ಮನೆಗೆ ತೆರಳಿ ಪ್ರಚಾರ ನಡೆಸುವ ನಿಯಮಗಳಲ್ಲಿ ಸಡಿಲಿಕೆ ನೀಡಿದೆ.

ಆಯೋಗವು ನಿಯಮಿತವಾಗಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದೆ ಮತ್ತು ಕೊರೊನಾ ವೈರಸ್ ಹರಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದೆ. ನಿರ್ಬಂಧಿತ ಸ್ವರೂಪದಲ್ಲಿ ನೇರವಾಗಿ ಪ್ರಚಾರ ಮಾಡಲು ರಾಜಕೀಯ ಪಕ್ಷಗಳಿಗೆ ಚುನಾವನಾ ಆಯೋಗ ಅವಕಾಶ ನೀಡಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.