ETV Bharat / bharat

ಕೋವಿಡ್​ ಸೋಂಕಿತ ಮಾವನನ್ನು ಹೆಗಲ ಮೇಲೆ ಹೊತ್ತು ಸಾಗಿದಳು ಸೊಸೆ! - ನಾಗಾವೊದ ರಾಹಾ ಮೂಲದ ನಿಹಾರಿಕಾ ದಾಸ್

ಸೊಸೆಯೊಬ್ಬಳು ಕೋವಿಡ್‌ ಸೋಂಕಿನಿಂದ ಬಳಲುತ್ತಿದ್ದ ಮಾವನನ್ನು ಹೆಗಲ ಮೇಲೆ ಹೊತ್ತು ಸಾಗಿದ ಘಟನೆ ಗುವಾಹಟಿಯ ನಾಗಾವೊ ಎಂಬಲ್ಲಿ ನಡೆದಿದೆ. ತನ್ನ ಅಸಹಾಯಕ ಪರಿಸ್ಥಿತಿಗೆ ಸಮಯವೂ ಆಕೆಗೆ ಸಹಕರಿಸದೇ ಇದ್ದಾಗ ಮಹಿಳೆ ಈ ರೀತಿಯಾದ ದಿಟ್ಟ ನಿರ್ಧಾರ ಕೈಗೊಂಡಿದ್ದಳು.

Assam woman
Assam woman
author img

By

Published : Jun 10, 2021, 1:39 PM IST

ಗುವಾಹಟಿ (ಅಸ್ಸಾಂ): ಕೊರೊನಾ ರೋಗಲಕ್ಷಣಗಳಿಂದ ಅಸ್ವಸ್ಥರಾಗಿದ್ದ ತನ್ನ ಮಾವನನ್ನು ಮಹಿಳೆಯೊಬ್ಬಳು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗುವ ದೃಶ್ಯ ಮನಕಲಕುವಂತಿತ್ತು.

ನಾಗಾವೊದ ರಾಹಾ ಮೂಲದ ನಿಹಾರಿಕಾ ದಾಸ್ (24)ತನ್ನ ಕುಟುಂಬದೊಂದಿಗೆ ವಾಸವಾಗಿದ್ದಳು. ಪತಿ ಸಿಲಿಗುರಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ತಂದೆಯನ್ನು ಸೊಸೆಯೇ ನೋಡಿಕೊಳ್ಳುತ್ತಿದ್ದಾಳೆ. ಆದ್ರೆ ಅವರ ಮಾವ (ಗಂಡನ ತಂದೆ) ತುಲೇಶ್ವರ ದಾಸ್ (75) ಅವರಿಗೆ ಜೂನ್ 2 ರಂದು ತೀವ್ರ ಅನಾರೊಗ್ಯ ಕಾಣಲಾರಂಭಿಸಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲು ತುರ್ತಾಗಿ ಹೊರಡಬೇಕಾಗಿ ಆಕೆ ಆಟೋ ವ್ಯವಸ್ಥೆ ಮಾಡಿದ್ದಳು. ಆದರೆ ತನ್ನ ನಿವಾಸದ ಹಾದಿ ಸರಿಯಿರದ ಕಾರಣ ಆಟೋ ಆಕೆಯ ಮನೆ ಬಾಗಿಲಿಗೆ ಬರಲಿಲ್ಲ.

ತುರ್ತು ಸಂದರ್ಭವಾದ ಕಾರಣ ದಾರಿ ಕಾಣದ ಆಕೆ ತನ್ನ ಅಸ್ವಸ್ಥ ಮಾವನನ್ನು ಹೆಗಲ ಮೇಲೆ ಹೊತ್ತುಕೊಂಡು ಆಟೋಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲಿಂದ ಅವರನ್ನು ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾಳೆ. ಅಲ್ಲಿ ಕೊರೊನಾ ವರದಿ ಪಾಸಿಟಿವ್​ ಬಂದಿತ್ತು. ಹಾಗೂ ದಾಸ್ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ ಆಸ್ಪತ್ರೆಯವರು ಅವರನ್ನು ನಗರದ ಕೋವಿಡ್​ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದ್ರೆ ದಾಸ್​ಗೆ ನಿಲ್ಲಲೂ ಕೂಡಾ ಶಕ್ತಿ ಇರಲಿಲ್ಲ. ಆ ಸಂದರ್ಭ ಅಲ್ಲಿ ಸ್ಟ್ರೆಚರ್ ಕೂಡಾ ಸಿಗಲಿಲ್ಲ. ಬೇರೆಡೆ ಕರೆದೊಯ್ಯಲು ಆಸ್ಪತ್ರೆಯ ವಾಹನ ನಿಲುಗಡೆ ತಾಣಕ್ಕೆ ಆಕೆಗೆ ಪುನಃ ಮಾವನನ್ನು ಹೊತ್ತುಕೊಂಡೇ ಬಂದಿದ್ದಳು.

6 ವರ್ಷದ ಮಗುವಿನ ತಾಯಿಯೊಬ್ಬಳು 75 ವರ್ಷದ ಮಾವನನ್ನು ಹೊತ್ತುಕೊಂಡು ಹೋಗುತ್ತಿರಬೇಕಾದರೆ ಅಲ್ಲಿದ್ದ ಜನರಲ್ಲಿ ಯಾರೊಬ್ಬರೂ ತನ್ನ ಸಹಾಯಕ್ಕೆ ಬರಲಿಲ್ಲ ಎಂದು ನಿಹಾರಿಕಾ ಬೇಸರ ವ್ಯಕ್ತಪಡಿಸಿದರು.

ಆದ್ರೆ ದುರಾದೃಷ್ಟಕ್ಕೆ ದಾಸ್ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದ ಬಳಿಕ, ಅಲ್ಲಿನ ವೈದ್ಯರು ನಿಹಾರಿಕಾ ಬಳಿ ಅವರ ಮಾವನಿಗೆ ಚಿಕಿತ್ಸೆ ನೀಡುವ ಸ್ಥಿತಿಯಲ್ಲಿಲ್ಲ ಎಂದು ಹೇಳಿ, ಅವರನ್ನು ನಾಗಾನ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಆಕೆ ಮತ್ತೆ ತನ್ನ ಮಾವನನ್ನು ಹೊತ್ತು ಮತ್ತೆ ಸಾಗಿಸಿದ್ದಳು. ಹೀಗೆ ಅಸಹಾಯಕ ಪರಿಸ್ಥಿತಿಯಿಂದ ಆಕೆ ಮೂರು ಬಾರಿ ತನ್ನ ಮಾವನನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಳು.

ಈ ಸಮಯದಲ್ಲಿಯೇ ಯಾರೋ ಕ್ಲಿಕ್ ಮಾಡಿದ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಮಾವನ ಆರೋಗ್ಯಕ್ಕೆ ಹೋರಾಡಿದ ನಿಹಾರಿಕಾಳನ್ನು ನೆಟಿಜನ್‌ಗಳು ಶ್ಲಾಘಿಸುತ್ತಿದ್ದಾರೆ. ಕೆಲವರು ಆಕೆಯನ್ನು ಮಾದರಿ ಸೊಸೆ ಎಂದು ಕೂಡ ಕರೆದಿದ್ದಾರೆ.

ಇದನ್ನೂ ಓದಿ: ಇದು ಕೋವಿಡ್‌ ಕಾಲ.. ಯಾವ ವಾಹನದಲ್ಲಿ ಪ್ರಯಾಣ ಹೆಚ್ಚು ಸುರಕ್ಷಿತ? ಈ ಅಧ್ಯಯನ ವರದಿ ತಪ್ಪದೆ ಓದಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.