ETV Bharat / bharat

ಲಾರಿಯ ಇಂಜಿನ್​ ಬಳಿ ಬಚ್ಚಿಟ್ಟು 8 ಕೆಜಿ ಚಿನ್ನ ಕಳ್ಳಸಾಗಾಟ: ಇಬ್ಬರ ಬಂಧನ - ಬಂಗಾರದ ಗಟ್ಟಿ ಸಾಗಣೆ

ಲಾರಿಯ ಇಂಜಿನ್​ ಬಳಿ ಬಚ್ಚಿಟ್ಟು ಸಾಗಿಸುತ್ತಿದ್ದ 8 ಕೆಜಿ ತೂಕದ ಬಂಗಾರವನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ.

gold bars smuggling
ಚಿನ್ನ ಕಳ್ಳಸಾಗಾಟ
author img

By

Published : Dec 12, 2021, 5:10 AM IST

ಆಂಗ್ಲಾಂಗ್ (ಅಸ್ಸೋಂ): ಅಸ್ಸೋಂ ಬೊಕಾಜಾನ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 8 ಕೆಜಿ ಚಿನ್ನವನ್ನು ವಶಕ್ಕೆ ಪಡೆದ ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿದ್ದಾರೆ. ಮಣಿಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಲಾರಿಯಲ್ಲಿ ಚಿನ್ನ ಪತ್ತೆಯಾಗಿದೆ.

ಅಸ್ಸೋಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಬೊಕಾಜಾನ್‌ನಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಣಿಪುರದ ಇಬ್ಬರು ಕಳ್ಳಸಾಗಣೆದಾರರು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು 8 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು.

ಮಣಿಪುರದಿಂದ ಗುವಾಹಟಿಗೆ ತೆರಳುತ್ತಿದ್ದ ಲಾರಿಯನ್ನು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ವಾಹನದ ಇಂಜಿನ್ ಬಳಿ ಚಿನ್ನವನ್ನು ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.

  • Assam police nabbed two people and recovered 49 gold bars weighing 8 kgs at Dillai in Karbi Anglong district yesterday: CM Himanta Biswa Sarma pic.twitter.com/SFhkxbPOT6

    — ANI (@ANI) December 11, 2021 " class="align-text-top noRightClick twitterSection" data=" ">

ಮಣಿಪುರ ಮೂಲದ ಪ್ರಕಾಶ್ ಸುಭಾಷ್ ಮತ್ತು ಪ್ರಕಾಶ್ ಬಸ್ನೆಟ್ ಎಂಬ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ ಸುಮಾರು ₹ 4 ಕೋಟಿ ಎಂದು ತಿಳಿದುಬಂದಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ, ಕಳ್ಳಸಾಗಾಣಿಕೆ ತಡೆದ ಅಸ್ಸೋಂ ಪೊಲೀಸರ ಕಾರ್ಯವೈಖರಿಗೆೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಟ್ವಿಟರ್​ ಖಾತೆ ಹ್ಯಾಕ್​.. ಬಿಟ್​ಕಾಯಿನ್ ಮಾನ್ಯತೆ​ ಕುರಿತಾದ ಟ್ವೀಟ್​​​ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.