ಗುವಾಹಟಿ( ಅಸ್ಸೋಂ): ಹುಡುಗಿಯನ್ನು ದುಷ್ಕರ್ಮಿಗಳು ಹಿಂಸಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ಈ ಸಂಬಂಧ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳ ಪತ್ತೆಗೆ ಜನರ ಸಹಕಾರ ಕೋರಿದ್ದಾರೆ. ವೈರಲ್ ವಿಡಿಯೋದಿಂದ ಈವರೆಗೆ ನಿಖರ ವಾದ ಸ್ಥಳ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ತಿಳಿದುಬಂದಿಲ್ಲವಾದರೂ ಕೂಡ ಸಂತ್ರಸ್ತ ಹುಡುಗಿ ಈಶಾನ್ಯ ರಾಜ್ಯದ ಕಡೆಯವಳು ಎಂದು ತಿಳಿದು ಬಂದಿದೆ.
ಇನ್ನು ಈ ವೈರಲ್ ವಿಡಿಯೋ ಬಗ್ಗೆ ಅಸ್ಸೋಂ ಪೊಲೀಸರು ಟ್ವೀಟ್ ಮಾಡಿದ್ದು, ಹುಡುಗಿಯನ್ನೂ ಸೇರಿದಂತೆ ಐವರು ದುಷ್ಕರ್ಮಿಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಚಿತ್ರಗಳು 5 ಅಪರಾಧಿಗಳಾಗಿದ್ದು, ಅವರು ವೈರಲ್ ವಿಡಿಯೋದಲ್ಲಿ ಹುಡುಗಿಯನ್ನು ಕ್ರೂರವಾಗಿ ಹಿಂಸಿಸುತ್ತಿದ್ದಾರೆ ಮತ್ತು ಉಲ್ಲಂಘಿಸಿದ್ದಾರೆ.

ಈ ಅಪರಾಧಕ್ಕೆ ಸಂಬಂಧಿಸಿದ ಯಾರಿಗಾದರೂ ಮಾಹಿತಿ ಇದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಬಹುದು. ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸರು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಡಿಯೋಕ್ಕೀಗ ಸ್ಪಷ್ಟತೆ ಸಿಕ್ಕಿದ್ದು, ಇದು ಬೆಂಗಳೂರಿನಲ್ಲಿ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ, ಈ ಬಗ್ಗೆ ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ ಸಿಕ್ಕಿಲ್ಲ.