ETV Bharat / bharat

ಮಹಿಳಾ ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಜಾಮೀನು ಅರ್ಜಿ ತೀರ್ಪು ನೀಡಲಿರುವ ಅಸ್ಸೋಂ ಕೋರ್ಟ್ - ಮಹಿಳಾಪೊಲೀಸ್ ಮೇಲೆ ಮಾಡಿದ ಜಿಗ್ನೇಶ್ ಮೆವಾನಿ ಬಂಧನ

ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಗ್ನೇಶ್ ಮೆವಾನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಅಸ್ಸೋಂನ ಬಾರ್ಪೇಟಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ.

Assam Court to pass order on Gujarat MLA Jignesh Mevani bail plea
ಮಹಿಳಾ ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಜಾಮೀನು ಅರ್ಜಿ ತೀರ್ಪು ನೀಡಲಿರುವ ಅಸ್ಸಾಂ ಕೋರ್ಟ್
author img

By

Published : Apr 29, 2022, 10:30 AM IST

ಬಾರ್ಪೇಟಾ(ಅಸ್ಸೋಂ): ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರ ಜಾಮೀನು ಅರ್ಜಿಯ ಕುರಿತು ಅಸ್ಸೋಂನ ಬಾರ್ಪೇಟಾ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇವಾನಿ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಜಾಮೀನು ಅರ್ಜಿಯ ವಿಚಾರಣೆ ಬಳಿಕ ನ್ಯಾಯಾಲಯ ಗುರುವಾರ ತೀರ್ಪು ಕಾಯ್ದಿರಿಸಿತ್ತು. ಬಾರ್ಪೇಟಾದ ಸೆಷನ್ ನ್ಯಾಯಾಧೀಶರು ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದೆ ಎಂದು ಜಿಗ್ನೇಶ್ ಮೇವಾನಿ ಅವರ ವಕೀಲ ಅಂಗ್ಸುಮನ್ ಬೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಮೊದಲು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್‌ಗಳಿಗೆ ಸಂಬಂಧಿಸಿದ ವಿಷಯಕ್ಕೆ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನು ಪಡೆದ ಕೂಡಲೇ ಮಹಿಳಾ ಪೊಲೀಸ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ಪೇಟಾ ಪೊಲೀಸರು ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿದ್ದರು. ಅಸ್ಸೋಂ ಬಿಜೆಪಿ ಮುಖಂಡ ಅರುಪ್ ಕುಮಾರ್ ಡೇ ಅವರು ನೀಡಿದ ದೂರಿನ ಆಧಾರ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮೇವಾನಿ ವಿರುದ್ಧ ಸೆಕ್ಷನ್ 120ಬಿ (ಅಪರಾಧದ ಪಿತೂರಿ), ಸೆಕ್ಷನ್ 153 (ಎ) (ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 (ಎ), ಮತ್ತು 504 (ಶಾಂತಿಗೆ ಧಕ್ಕೆ ಉಂಟುಮಾಡುವುದು),ಐಟಿ ಕಾಯ್ದೆ ಮುಂತಾದ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜಕೀಯ ದ್ವೇಷದಿಂದ ತನ್ನನ್ನು ಬಂಧಿಸಲಾಗಿದೆ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದು, ಅವರ ಬಂಧನವನ್ನು ಖಂಡಿಸಿ, ಅಸ್ಸೋಂ ರಾಜ್ಯ ಕಾಂಗ್ರೆಸ್ ಘಟಕ ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ: ತೆಲಂಗಾಣ ಸಿಎಂ ಭೇಟಿಯಾದ ಜಾರ್ಖಂಡ್ ಸಿಎಂ: ಶೀಘ್ರದಲ್ಲೇ ಬಿಜೆಪಿಯೇತರ ಸಿಎಂಗಳ ಸಭೆಗೆ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.